ಹಿಮಚಲಪ್ರದೇಶದಲ್ಲಿ ಭೂಕುಸಿತ; ರಸ್ತೆಗಳು ಜಲಾವೃತ

PC : PTI
ಚಂಡೀಗಢ, ಆ. 26: ಹಿಮಾಚಲಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂಕುಸಿತಗಳು ಸಂಭವಿಸಿವೆ ಹಾಗೂ ನದಿಗಳು ಮತ್ತು ತೊರೆಗಳು ತುಂಬಿ ಹರಿಯುತ್ತಿವೆ. ಇದರ ಪರಿಣಾಮವಾಗಿ, ರಾಜ್ಯದ ಹವಲು ಭಾಗಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಕಿರಾತಪುರ-ಮನಾಲಿ ರಾಷ್ಟ್ರೀಯ ಹೆದ್ದಾರಿಯ ಹಲವು ಸ್ಥಳಗಳಲ್ಲಿ ಭಾರೀ ಹಾನಿ ಸಂಭವಿಸಿದ್ದು, ರಸ್ತೆ ಸಂಚಾರವನ್ನು ನಿಲ್ಲಿಸಲಾಗಿದೆ. ಹಲವು ರಸ್ತೆಗಳು ಮತ್ತು ಮನಾಲಿಯಲ್ಲಿ ಒಂದು ರೆಸ್ಟೋರೆಂಟ್ ಕೊಚ್ಚಿ ಹೋಗಿವೆ. ಮಂಡಿಯಲ್ಲಿ ಸ್ಥಳೀಯರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ.
ಲಹೌಲ್ ಮತ್ತು ಸ್ಪಿಟಿ ಹೊರತುಪಡಿಸಿ ಗುಡ್ಡಗಾಡು ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ರವಿವಾರ ರಾತ್ರಿಯಿಂದ ಮಳೆ ಸುರಿಯುತ್ತಿದೆ. ಸೆಪ್ಟಂಬರ್ ಒಂದರವರೆಗೆ ಮಳೆ ನಿಲ್ಲುವ ಸೂಚನೆ ಇಲ್ಲ ಎನ್ನಲಾಗಿದೆ. ಚಂಬ, ಕಾಂಗ್ರ, ಉನ ಮತ್ತು ಲಹೌಲ್ ಜಿಲ್ಲೆಗಳಲ್ಲಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಜಿಲ್ಲಾಡಳಿತಗಳು ಸೂಚನೆ ನಿಡಿವೆ.
Next Story





