ಹಿಟ್ ಆಂಡ್ ರನ್ ಪ್ರಕರಣ | ಕಾರು ಚಲಾಯಿಸುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಆರೋಪಿ ಮಿಹಿರ್ ಶಾ
ಮಿಹಿರ್ ಶಾ | PC : PTI
ಮುಂಬೈ: ಓರ್ವ ಮಹಿಳೆಯ ಸಾವಿಗೀಡಾಗಿ, ಆಕೆಯ ಪತಿ ಗಾಯಗೊಂಡ ಘಟನೆಗೆ ಸಾಕ್ಷಿಯಾದ ಮುಂಬೈ ಬಿಎಂಡಬ್ಲ್ಯು ಹಿಟ್ ಆ್ಯಂಡ್ ರನ್ ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಶಾ ತಪ್ಪೊಪ್ಪಿಕೊಂಡಿದ್ದು, ಅಪಘಾತ ನಡೆದ ಸಂದರ್ಭ ತಾನು ಕಾರನ್ನು ಚಲಾಯಿಸುತ್ತಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ ಪ್ರಮುಖ ಆರೋಪಿ ಮಿಹಿರ್ ಶಾ ಹಾಗೂ ಆತನ ಚಾಲಕ ರಾಜರ್ಷಿ ಬಿದಾವತ್ ಅವರನ್ನು ವಿಚಾರಣೆಗೊಪಡಿಸಿದ ಸಂದರ್ಭ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
‘‘ಇಬ್ಬರು ಆರೋಪಿಗಳೂ ಅಪರಾಧದಲ್ಲಿ ತಮ್ಮ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಹಾಗೂ ಅಘಾತ ನಡೆದ ರಾತ್ರಿ ಸಮಯದಿಂದ ದೃಶ್ಯದ ಮರುಸೃಷ್ಟಿಯನ್ನು ನಡೆಸಿದ್ದಾರೆ. ಸಿಜೆ ಹೌಸ್ ವರ್ಲಿಯಿಂದ ಸೀ ಲಿಂಕ್ ವರ್ಲಿವರೆಗೆ ದೃಶ್ಯದ ಮರುಸೃಷ್ಟಿಯನ್ನು ನಡೆಸಲಾಯಿತು” ಎಂದು ಪೊಲೀಸರು ತಿಳಿಸಿದ್ದಾರೆ.
ರವಿವಾರ ಮುಂಜಾನೆ ದಂಪತಿಯ ಸ್ಕೂಟರ್ಗೆ ತನ್ನ ಕಾರನ್ನು ಡಿಕ್ಕಿ ಹೊಡೆಸಿದ್ದ ಮಿಹಿರ್ ಶಾನಿಗೆ ತನ್ನ ವಿಲಾಸಿ ಕಾರಿನ ಟೈರ್ಗಳಲ್ಲೊಂದರಲ್ಲಿ ಮಹಿಳೆಯು ಸಿಲುಕಿದ್ದಾಳೆಂಬುದು ಶಾ ಅವರಿಗೆ ಅರಿವಿದ್ದರೂ ಆತ ಕಾರನ್ನು ನಿರ್ಲಕ್ಷ್ಯದಿಂದ ಚಲಾಯಿಸಿದ್ದ ಹಾಗೂ ಸಮೀಪದಲ್ಲಿ ಹಾದುಹೋಗುತ್ತಿದ್ದ ವಾಹನ ಸವಾರರು ಭಯಭೀತರಾಗಿ ಸನ್ನೆಗಳನ್ನು ಮಾಡಿದ್ದಲ್ಲದೆ ಜೋರಾಗಿ ಕೂಗಿ ಆತನಿಗೆ ನಿಲ್ಲುವಂತೆ ಹೇಳಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಅಪಘಾತದ ಬಳಿಕ ತಲೆಮರೆಸಿಕೊಂಡಿದ್ದ ಮಿಹಿರ್ ಶಾ ತನ್ನ ಗುರುತನ್ನು ಮರೆಮಾಚಲು ಶಾ ತನ್ನ ಗಡ್ಡವನ್ನು ಬೋಳಿಸಿದ್ದ ಹಾಗೂ ತನ್ನ ಕೂದಲನ್ನು ಕತ್ತರಿಸಿಕೊಂಡಿದ್ದನೆಂದು ಅವರು ಹೇಳಿದ್ದಾರೆ. ತನ್ನ ರೂಪವನ್ನು ಬದಲಾಯಿಸಲು ಆತನಿಗೆ ಯಾರಾದರೂ ನೆರವಾಗಿದ್ದರೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದವರು ತಿಳಿಸಿದ್ದಾರೆ.
24 ವರ್ಷದ ಮಿಹಿರ್ ಶಾ ಜುಲೈ 16ರಿಂದ ಪೊಲೀಸ್ ವಶದಲ್ಲಿದ್ದಾನೆ. ತಾನು ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದಾಗಿ ಆತ ಹೇಳಿಕೊಂಡಿದ್ದರೂ, ಆ ಕುರಿತ ದಾಖಲೆಪತ್ರ ಇನ್ನೂ ಕೂಡಾ ಲಭ್ಯವಾಗಿಲ್ಲವೆಂದು ಅವರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಮಿಹಿರ್ಶಾನ ತಾಯಿ, ಸೋದರಿಯರು ಹಾಗೂ ಸ್ ಸೇರಿದಂತೆ 14 ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಿಹಿರ್ ಶಾನ ತಂದೆ ರಾಜೇಶ್ ಶಾ, ಪಕ್ಕದ ಪಾಲ್ಘಾರ್ ಜಿಲ್ಲೆಯಲ್ಲಿ ಶಿವಸೇನಾ ಪಕ್ಷದ ನಾಯಕನಾಗಿದ್ದು, ಆತ ಕೂಡಾ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಅವರು ಪ್ರಸಕ್ತ ಜಾಮೀನು ಬಿಡುಗಡೆಯಲ್ಲಿದ್ದಾರೆ.
ಮಿಹಿರ್ಶಾ ವಿರುದ್ಧ ಪೊಲೀಸರು ಕೊಲೆಯಲ್ಲದ ದಂಡನೀಯವಾದ ನರಹತ್ಯೆ ಮತ್ತಿತರ ಆರೋಪಗಳನ್ನು ದಾಖಲಿಸಿದ್ದಾರೆ.