ಜೋಧ್ ಪುರದಲ್ಲಿ ಟೆಂಪೋ–ಟ್ರಕ್ ನಡುವೆ ಭೀಕರ ಅಪಘಾತ : ಕನಿಷ್ಠ 6 ಮಂದಿ ಮೃತ್ಯು, 14 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ
ಜೋಧ್ ಪುರ : ರಾಷ್ಟ್ರೀಯ ಹೆದ್ದಾರಿ–125ರ ಜೋಧಪುರ–ಬಾಲೆಸರ್ ರಸ್ತೆಯಲ್ಲಿ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಟೆಂಪೋ ಧಾನ್ಯ ಚೀಲಗಳನ್ನು ತುಂಬಿದ್ದ ಟ್ರಕ್ಗೆ ಢಿಕ್ಕಿ ಹೊಡೆದ ಪರಿಣಾಮ 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಜೋಧ್ ಪುರ ಜಿಲ್ಲೆಯ ಖಾರಿ ಬೇರಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಗುಜರಾತ್ನ ಬನಸ್ಕಂತ ಹಾಗೂ ಧನ್ಸುರ ಪ್ರದೇಶಗಳಿಂದ 20 ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಟೆಂಪೋ ವಿರುದ್ಧ ದಿಕ್ಕಿನಿಂದ ಬಂದ ವೇಗದ ಟ್ರಕ್ಗೆ ಢಿಕ್ಕಿ ಹೊಡೆದಿದೆ ಎಂದು ಬಾಲೆಸರ್ ಪೊಲೀಸ್ ಠಾಣೆಯ ಎಸ್ಎಚ್ಒ ಮೂಲ್ಸಿಂಗ್ ಭಾಟಿ ಹೇಳಿದ್ದಾರೆ.
ಘಟನೆಯ ತೀವ್ರತೆಗೆ ಮೂವರು ಮಹಿಳೆಯರು ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಬಾಲೆಸರ್ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಗಾಯಗೊಂಡ 14 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೋಧ್ ಪುರದ ಎಂಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಭಾಟಿ ತಿಳಿಸಿದ್ದಾರೆ.
Next Story





