ಹೋಶಿಯಾರಪುರ: ಭಾರೀ ಮಳೆಗೆ ಹಲವು ಗ್ರಾಮಗಳು ಜಲಾವೃತ

Photo: PTI
ಹೋಶಿಯಾರಪುರ: ಶನಿವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಇಲ್ಲಿಯ ದಸುಯಾ ಉಪವಿಭಾಗದಲ್ಲಿಯ ಹಲವಾರು ಗ್ರಾಮಗಳು ಜಲಾವೃತಗೊಂಡಿವೆ. ಅಧಿಕಾರಿಗಳು ಕೆಲವು ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ನೀರಿನಿಂದಾಗಿ ಮನೆಯಲ್ಲಿಯ ವಸ್ತುಗಳು ಹಾನಿಗೀಡಾಗಿವೆ ಎಂದು ಕೆಲವು ನಿವಾಸಿಗಳು ದೂರಿದ್ದಾರೆ. ಹಲವು ಗ್ರಾಮಗಳಲ್ಲಿ ಕೃಷಿ ಭೂಮಿಗೂ ನೀರು ನುಗ್ಗಿದೆ. ಜಿಯೊ ಚಾಕ್ ಗ್ರಾಮದಲ್ಲಿಯ ಪೌಲ್ಟ್ರಿ ಫಾರ್ಮ್ನಲ್ಲಿಯ ಕೋಳಿಗಳು ನೆರೆನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.
Next Story





