‘ಐ ಲವ್ ಮುಹಮ್ಮದ್’ ಪೋಸ್ಟರ್ ವಿವಾದ : ಮೀರತ್ ಸಮೀಪ ಐವರ ಬಂಧನ

Photo Credit: SHASHI SHEKHAR KASHYAP / thehindu
ಮೀರತ್,ಆ.4: ಉತ್ತರಪ್ರದೇಶದ ಮೀರತ್ ನಗರಕ್ಕೆ ಸಮೀಪದ ಪಟ್ಟಣವೊಂದರಲ್ಲಿ ‘ಐ ಲವ್ ಮುಹಮ್ಮದ್’ ಪೋಸ್ಟರ್ ಅನ್ನು ಅಳವಡಿಸಿದ ಆರೋಪಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ.
ಮವಾನಾ ಪಟ್ಟಣದ ಕೇಂದ್ರ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಈ ಪೋಸ್ಟರ್ ಅನ್ನು ಅಳವಡಿಸಲಾಗಿತ್ತು. ಕೆಲವು ಸ್ಥಳೀಯರು ಪೋಸ್ಟರ್ ಬಗ್ಗೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದರು ಹಾಗೂ ಪ್ರತಿಭಟನೆಯನ್ನು ನಡೆಸಿದರು.
ಮವಾನಾ ಹೊರಠಾಣೆಯ ಉಸ್ತುವಾರಿ ಮನೋಜ್ ಶರ್ಮಾ ಅವರು ನೀಡಿದ ದೂರನ್ನು ಆಧರಿಸಿ ಇದ್ರಿಶ್, ತಸ್ಲೀಮ್, ರಿಹಾನ್, ಗುಲ್ಫಾಮ್ ಹಾಗೂ ಹರೂನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 353ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆಯೆಂದು ಮವಾನಾ ಪೊಲೀಸ್ ಠಾಣಾಧಿಕಾರಿ ಪೂನಂ ಜಡೋನ್ ತಿಳಿಸಿದ್ದಾರೆ.
ಎಲ್ಲಾ ಐದು ಮಂದಿಯನ್ನು ಬಂಧಿಸಲಾಗಿದೆ. ಈ ಘಟನೆಯಲ್ಲಿ ಶಾಮೀಲಾದ ಪ್ರತಿಯೊಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದೆಂದು ಅವರು ಹೇಳಿದ್ದಾರೆ. ವಿವಾದ ಹಿನ್ನೆಲೆಯಲ್ಲಿ, ಪೋಸ್ಟರ್ ಅನ್ನು ತೆರವುಗಳಿಸಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
ಯಾವುದೇ ವದಂತಿಗಳನ್ನು ಹರಡುವುದನ್ನು ತಡೆಯಲು ಪೊಲೀಸ್ ಗಸ್ತನ್ನು ಹೆಚ್ಚಿಸಲಾಗಿದೆ ಹಾಗೂ ಶಾಂತಿ ಕಾಪಾಡುವಂತೆ ಮತ್ತು ಯಾವುದೇ ವದಂತಿಗಳು ಹರಡುವುದನ್ನು ತಡೆಯಲು ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.







