ಜಿತೇಂದ್ರ ಆವ್ಹಾಡ್ ನನ್ನು ನಾನೇ ಹತ್ಯೆಗೈಯುತ್ತೇನೆ: ಅಯೋಧ್ಯೆ ಸ್ವಾಮೀಜಿಯ ವಿವಾದಾತ್ಮಕ ಹೇಳಿಕೆ
ಜಿತೇಂದ್ರ ಆವ್ಹಾಡ್ | Photo: PTI
ಗುವಾಹಟಿ: ಶ್ರೀರಾಮ ಮಾಂಸಹಾರಿ ಎಂದು ಹೇಳಿಕೆ ನೀಡಿರುವ ಎನ್ಸಿಪಿ (ಶರದ್ ಪವಾರ್ ಬಣ)ಯ ಹಿರಿಯ ನಾಯಕ ಜಿತೇಂದ್ರ ಆವ್ಹಾಡ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೇ, ನಾನೇ ಅವರನ್ನು ಹತ್ಯೆಗೈಯುತ್ತೇನೆ ಎಂದು ಅಯೋಧ್ಯೆಯ ಪ್ರಮುಖ ಸ್ವಾಮೀಜಿ ಹಾಗೂ ಧಾರ್ಮಿಕ ಮುಖಂಡ ತಪಸ್ವಿ ಚಾನ್ವಿ ಪರಮಹಂಸ ಆಚಾರ್ಯ ಅವರು ಗುರುವಾರ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಜಿತೇಂದ್ರ ಆವ್ಹಾಡ್ ಅವರ ಹೇಳಿಕೆ ಲಕ್ಷಾಂತರ ರಾಮ ಭಕ್ತರ ಮನಸ್ಸಿಗೆ ನೋವುಂಟು ಮಾಡಿದೆ’’ ಎಂದಿದ್ದಾರೆ.
‘‘ ಜಿತೇಂದ್ರ ಆವ್ಹಾಡ್ ಬೇರೆ ಧರ್ಮದ ಕುರಿತು ಇಂತಹ ಹೇಳಿಕೆ ನೀಡಿದ್ದರೆ, ಜೀವಂತವಾಗಿ ಇರುತ್ತಿರಲಿಲ್ಲ. ರಾಮನ ಕುರಿತ ಇಂತಹ ಹೇಳಿಕೆಯನ್ನು ದೇಶ ಸಹಿಸುವುದಿಲ್ಲ’’ ಎಂದು ಅವರು ಹೇಳಿದ್ದಾರೆ.
ರಾಮಜನ್ಮಭೂಮಿಯ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್, ಶ್ರೀರಾಮನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಜಿತೇಂದ್ರ ಆವ್ಹಾಡ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ
Next Story