ಮ.ಪ್ರ:ವಾಯುಪಡೆ ವಿಮಾನ ತುರ್ತು ಭೂಸ್ಪರ್ಶ, ಎಲ್ಲ ಆರೂ ಜನರು ಸುರಕ್ಷಿತ

Photo Credit: PTI
ಭೋಪಾಲ : ಆರು ಜನರು ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ವಿಮಾನವೊಂದು ರವಿವಾರ ತಾಂತ್ರಿಕ ದೋಷದಿಂದ ಮಧ್ಯಪ್ರದೇಶದ ರಾಜಧಾನಿ ಭೋಪಾಲ ಸಮೀಪದ ಗ್ರಾಮದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಝಾನ್ಸಿಯಿಂದ ಭೋಪಾಲಕ್ಕೆ ಪ್ರಯಾಣಿಸುತ್ತಿದ್ದ ವಿಮಾನವು ಬೆಳಿಗ್ಗೆ 8.45ರ ಸುಮಾರಿಗೆ ಡುಂಗರಿಯಾ ಗ್ರಾಮದ ಕಬ್ಬಿನ ಗದ್ದೆಯಲ್ಲಿ ತುರ್ತಾಗಿ ಇಳಿದಿದ್ದು, ಪೈಲಟ್ ಮತ್ತು ಐವರು ಸಿಬ್ಬಂದಿಗಳು ಸುರಕ್ಷಿತರಾಗಿದ್ದಾರೆ ಎಂದು ಪೋಲಿಸರು ತಿಳಿಸಿದರು.
Next Story





