ಐಸಿಸಿ ಟಿ-20 ಬೌಲರ್ಗಳ ರ್ಯಾಂಕಿಂಗ್ |ರವಿ ಬಿಷ್ಣೋಯಿ, ಅರ್ಷದೀಪ್ ಸಿಂಗ್ ಗೆ ಭಡ್ತಿ

ರವಿ ಬಿಷ್ಣೋಯಿ, ಅರ್ಷದೀಪ್ ಸಿಂಗ್ | PC : PTI
ದುಬೈ, ಸೆ.10: ರವಿ ಬಿಷ್ಣೋಯಿ ಹಾಗೂ ಅರ್ಷದೀಪ್ ಸಿಂಗ್ ಬುಧವಾರ ಬಿಡುಗಡೆಯಾಗಿರುವ ಐಸಿಸಿ ಟಿ-20 ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಭಡ್ತಿ ಪಡೆದಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಯುಎಇ ನಡುವೆ ನಡೆದಿದ್ದ ತ್ರಿಕೋನ ಸರಣಿಯ ನಂತರ ರ್ಯಾಂಕಿಂಗ್ ಬಿಡುಗಡೆ ಮಾಡಲಾಗಿದೆ. ತ್ರಿಕೋನ ಸರಣಿಯ ಫೈನಲ್ ನಲ್ಲಿ ಅಫ್ಘಾನಿಸ್ತಾನ ತಂಡವನ್ನು ಮಣಿಸಿದ್ದ ಪಾಕಿಸ್ತಾನ ತಂಡವು ಪ್ರಶಸ್ತಿ ಜಯಿಸಿತ್ತು.
ನಾಲ್ಕನೇ ಸ್ಥಾನದಲ್ಲಿರುವ ವರುಣ್ ಚಕ್ರವರ್ತಿ ಗರಿಷ್ಠ ರ್ಯಾಂಕಿ ನಲ್ಲಿರುವ ಭಾರತೀಯ ಬೌಲರ್ ಆಗಿದ್ದಾರೆ. ರವಿ ಹಾಗೂ ಅರ್ಷದೀಪ್ ಕ್ರಮವಾಗಿ 6ನೇ ಹಾಗೂ 10ನೇ ಸ್ಥಾನದಲ್ಲಿದ್ದಾರೆ. ನ್ಯೂಝಿಲ್ಯಾಂಡ್ ನ ಬೌಲರ್ ಜೇಕಬ್ ಡಫಿ ಅಗ್ರ ಸ್ಥಾನದಲ್ಲಿದ್ದಾರೆ.
ಬ್ಯಾಟರ್ಗಳ ಟಿ-20 ರ್ಯಾಂಕಿಂಗ್ ನಲ್ಲಿ ಅಭಿಷೇಕ್ ಶರ್ಮಾ ಹಾಗೂ ತಿಲಕ್ ವರ್ಮಾ ಕ್ರಮವಾಗಿ ನಂ.1 ಹಾಗೂ 2ನೇ ಸ್ಥಾನದಲ್ಲಿದ್ದಾರೆ.
ಭಾರತವು ವಿಶ್ವದ ನಂ.1 ಟಿ-20 ತಂಡವೆಂಬ ಸ್ಥಾನಮಾನ ಉಳಿಸಿಕೊಂಡಿದೆ.
Next Story





