ಕೋಲ್ಕತಾ | ಹಾಸ್ಟೆಲ್ನಲ್ಲಿ ಸಸ್ಯಾಹಾರಿ, ಮಾಂಸಹಾರಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಭೋಜನ ವ್ಯವಸ್ಥೆ

ಖರಗಪುರ ಐಐಟಿ | PC : iitkgp.ac.in
ಕೋಲ್ಕತಾ,ಸೆ.12: ಹಾಸ್ಟೆಲ್ನ ಭೋಜನ ಶಾಲೆಗಳಲ್ಲಿ ಸಸ್ಯಾಹಾರಿ ಹಾಗೂ ಮಾಂಸಹಾರಿಗಳೆಂಬ ಆಧಾರದಲ್ಲಿ ವಿದ್ಯಾರ್ಥಿಗಳ ಆಸನ ವ್ಯವಸ್ಥೆಯನ್ನು ಪ್ರತ್ಯೇಕಿಸುವುದಕ್ಕಾಗಿ ಜಾರಿಗೊಳಿಸಲಾದ ನೋಟಿಸ್ ಒಂದನ್ನು ಖರಗಪುರದ ಭಾರತೀಯ ತಂತ್ರಜ್ಞಾನ ವಿದ್ಯಾಲಯ (ಐಐಟಿ)ಯು ಹಿಂದೆಗೆದುಕೊಂಡಿರುವುದಾಗಿ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಉನ್ನತ ಅಧಿಕಾರಿಗಳ ಗಮನಕ್ಕೆ ತಾರದೆಯೇ ಬಿ.ಆರ್.ಅಂಬೇಡ್ಕರ್ ಭೋಜನಶಾಲೆಯಲ್ಲಿ ಆಹಾರಸೇವನೆ ಪ್ರವೃತ್ತಿಯನ್ನು ಆಧರಿಸಿ ವಿದ್ಯಾರ್ಥಿಗಳ ಆಸನ ವ್ಯವಸ್ಥೆಗಳನ್ನು ಪ್ರತ್ಯೇಕಿಸುವ ಕುರಿತಾಗಿ ನೋಟಿಸ್ ಅನ್ನು ಜಾರಿಗೊಳಿಸಲಾಗಿತ್ತು ಎಂದು ಖರಗಪುರ ಐಐಟಿಯ ನಿರ್ದೇಶಕ ಸುಮನ್ ಚಕ್ರವರ್ತಿ ಶುಕ್ರವಾರ ತಿಳಿಸಿದ್ದಾರೆ.
‘‘ ಈ ನಿರ್ಧಾರವು ಗಮನಕ್ಕೆ ಬಂದೊಡನೆ, ಸಂಸ್ಥೆಯ ಉನ್ನತ ಅಧಿಕಾರಿಗಳ ಜೊತೆ ತಕ್ಷಣವೇ ಸಮಾಲೋಚನೆ ನಡೆಸಿ, ಅದನ್ನು ರದ್ದುಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಹಾರಸೇವನೆ ಪ್ರವೃತ್ತಿಯ ಆಯ್ಕೆ ಆಧಾರದಲ್ಲಿ ವಿದ್ಯಾರ್ಥಿಗಳನ್ನು ವಿಂಗಡಿಸುವ ಯಾವುದೇ ಸೂಚನಾಫಲಕವನ್ನು ಅಳವಡಿಸಬಾರದು. ಯಾವುದೇ ಭೋಜನಶಾಲೆಯಲ್ಲಿ ಇಂತಹ ಯಾವುದೆ ಸೂಚನಾಫಲಕ ಕಂಡುಬಂದರೂ ಅದನ್ನು ತಕ್ಷಣವೇ ತೆರವುಗೊಳಿಸಬೇಕೆಂದು ಆದೇಶಿಸಿದ್ದೇವೆ’’ ಎಂದು ಅವರು ತಿಳಿಸಿದ್ದಾರೆ.
ಆಹಾರದ ಆದ್ಯತೆಗಳನ್ನು ಆಧರಿಸಿ ವ್ಯಕ್ತಿಗಳನ್ನು ಪ್ರತ್ಯೇಕಿಸುವಂತಹ ಆದೇಶವನ್ನು ಶಿಕ್ಷಣ ಸಂಸ್ಥೆ ಹೊರಡಿಸುವಂತಿಲ್ಲವೆಂದು ಚಕ್ರವರ್ತಿ ತಿಳಿಸಿದ್ದಾರೆ.
ಆಗಸ್ಟ್ 16ರಂದು ಖರಗ್ಪುರ ಐಐಟಿ ಹಾಸ್ಟೆಲ್ನ ಬಿ.ಆರ್.ಅಂಬೇಡ್ಕರ್ ಭೋಜನಶಾಲೆಯಲ್ಲಿ ಸಸ್ಯಾಹಾರ ಹಾಗೂ ಮಾಂಸಹಾರ ಸೇವಿಸುವವರಿಗೆ ಪ್ರತ್ಯೇಕ ಆಸನ ವ್ಯವಸ್ಥೆಯ ಏರ್ಪಾಡನ್ನು ಮಾಡಲಾಗಿತ್ತು.
2006ರ ಮುಂಬೈ ಸರಣಿ ರೈಲು ಸ್ಪೋಟ ಪ್ರಕರಣದಲ್ಲಿ ದೋಷಮುಕ್ತನಿಂದ 9 ಕೋಟಿ ರೂ. ಪರಿಹಾರಕ್ಕೆ ಆಗ್ರಹ
ಮುಂಬೈ,ಸೆ.12:, ತನ್ನನ್ನು ಅನ್ಯಾಯವಾಗಿ 9 ವರ್ಷಗಳ ಕಾಲ ಜೈಲು ವಾಸ ಅನುಭವಿಸುವಂತೆ ಮಾಡಿದ್ದಕ್ಕಾಗಿ ಹಾಗೂ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದಕ್ಕಾಗಿ 9 ಕೋಟಿ ರೂ. ಪರಿಹಾರ ನೀಡಬೇಕೆಂದು, 2006ರ ಮುಂಬೈ ಸರಣಿ ರೈಲು ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿ, 2015ರಲ್ಲಿ ದೋಷಮುಕ್ತಗೊಂಡ ವಾಹಿದ್ ಶೇಖ್ ಆಗ್ರಹಿಸಿದ್ದಾರೆ.
ವಾಹಿದ್ ಶೇಖ್ ಅವರು ಈ ಬಗ್ಗೆ ಶುಕ್ರವಾರ ಬಹಿರಂಗ ಪತ್ರವೊಂದನ್ನು ಬರೆದಿದ್ದು ತನಗೆ ಹಾಗೂ ತನ್ನ ಕುಟುಂಬಕ್ಕೆ ತೀವ್ರ ಅನ್ಯಾಯವಾಗಿರುವುದಕ್ಕಾಗಿ ಹಾಗೂ ಉತ್ತರದಾಯಿತ್ವದೆಡೆಗೆ ಹೆಜ್ಜೆಯಾಗಿ ತನಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
‘‘ನಾನು ಜೈಲಿನಿಂದ ಹೊರಬಂದಿದ್ದೇನೆ, ಆದರೆ ನಾನು ಕಳೆದುಕೊಂಡ ವರ್ಷಗಳು, ಎದುರಿಸಿದ ಅಪಮಾನ ಮತ್ತು ನನ್ನ ಕುಟುಂಬ ಅನುಭವಿಸಿದ ಯಾತನೆಯನ್ನು ಅಳಿಸಲು ಸಾಧ್ಯವಿಲ್ಲವೆಂದು ಅವರು ಹೇಳಿದ್ದಾರೆ.
ಕಸ್ಟಡಿಯಲ್ಲಿ ತನಗೆ ಚಿತ್ರಹಿಂಸೆ ನೀಡಲಾಗಿದ್ದು, ಇದರಿಂದಾಗಿ ತನಗೆ ಗ್ಲುಕೋಮಾ ಹಾಗೂ ದೀರ್ಘಕಾಲಿನ ನೋವು ಸೇರಿದಂತೆ ಶಾಶ್ವತವಾದ ಆರೋಗ್ಯ ಸಮಸ್ಯೆಗಳುಂಟಾಗಿವೆ ಎಂದು ವಾಹಿದ್ ಹೇಳಿದ್ದಾರೆ.
ನಾನು ಜೈಲಿನಲ್ಲಿದ್ದಾಗ ನನ್ನ ತಂದೆ ನಿಧನರಾದರು. ನನ್ನ ತಾಯಿ ಮಾನಸಿಕ ಆರೋಗ್ಯ ಕುಸಿದುಬಿತ್ತು ಮತ್ತು ನನ್ನ ಪತ್ನಿಯು ಏಕಾಂಗಿಯಾಗಿಯೇ ಕಷ್ಟಪಟ್ಟು ನಮ್ಮ ಮಕ್ಕಳನ್ನು ಬೆಳೆಸಿದ್ದಳು. ತನ್ನ ವೃತ್ತಿಜೀವನ ಹಾಗೂ ಶಿಕ್ಷಣ ಕೂಡಾ ಭಗ್ನಗೊಂಡಿದ್ದು, 30 ಲಕ್ಷ ರೂ.ಗೂ ಅಧಿಕ ಸಾಲವನ್ನು ಹೊಂದಿರುವುದಾಗಿ ಶೇಖ್ ಪತ್ರದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ತಾನು ಪರಿಹಾರಕ್ಕಾಗಿ ಆಗ್ರಹಿಸಿರುವ ಹಿನ್ನೆಲೆಯಲ್ಲಿ ಪ್ರಕರಣದ ಆರೋಪಿಗಳ ಬಗ್ಗೆ ಹೆಚ್ಚು ಕ್ರೌರ್ಯದಿಂದ ವರ್ತಿಸುವ ಸಾಧ್ಯತೆಯಿದೆ ಎಂದು ಶೇಖ್ ಆತಂಕ ವ್ಯಕ್ತಪಡಿಸಿದ್ದಾರೆ.







