ಮದ್ರಾಸ್ ಐಐಟಿ ಶಾಲಾ ವಿದ್ಯಾರ್ಥಿಗಳ ಮೇಲೆ ಪರೀಕ್ಷಾರ್ಥ ಪ್ರಯೋಗ: ಭುಗಿಲೆದ್ದ ವಿವಾದ

ಚೆನ್ನೈ: ಮದ್ರಾಸ್ ಐಐಟಿ ತನ್ನ ಕ್ಯಾಂಪಸ್‍ನಲ್ಲಿ ನಡೆಸುವ ವನ ವಾಣಿ ಮೆಟ್ರಿಕ್ಯುಲೇಶನ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳ ಮೇಲೆ ಉತ್ಪನ್ನವೊಂದರ ಪರೀಕ್ಷಾರ್ಥ ಪ್ರಯೋಗ ನಡೆಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಪ್ರಯೋಗಕ್ಕೆ ಮುನ್ನ ಪೋಷಕರ ಒಪ್ಪಿಗೆ ಪಡೆದಿಲ️್ಲ ಎಂದು ಪೋಷಕರು ಆಕ್ಷೇಪಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ, ಶಾಲೆಯ ಪ್ರಾಚಾರ್ಯ ಎಂ.ಸತೀಶ್‍ಕುಮಾರ್ ಅವರನ್ನು ಮದ್ರಾಸ್ ಐಐಟಿ ವಜಾಗೊಳಿಸಿದೆ.
ಕೆಲ️ ಪೋಷಕರು ದೂರು ನೀಡಿದಂತೆ ಆಗಸ್ಟ್ 19ರಂದು ವಿದ್ಯಾರ್ಥಿಗಳು ತಮ್ಮ ಶೂಗಳಲ್ಲಿ 'ಸ್ಮಾರ್ಟ್ ಇನ್‍ಸೋಲ್' ಮತ್ತು ಸ್ಮಾರ್ಟ್‍ವಾಚ್ ಧರಿಸುವಂತೆ ಸೂಚಿಸಲಾಗಿತ್ತು ಮತ್ತು ಹಾರುತ್ತ ನಿರ್ದಿಷ್ಟ ಅಂತರವನ್ನು ಕ್ರಮಿಸುವಂತೆ ಹೇಳಲಾಗಿತ್ತು. ಐಐಟಿ-ಎಂ ಬೋಧಕರು ಮತ್ತು ವಿದ್ಯಾರ್ಥಿಗಳು ಈ ಪ್ರಯೋಗ ನಡೆಸಿದ್ದರು.
"ಕ್ರೀಡಾಸಂಬಂಧಿ ಉತ್ಪನ್ನವನ್ನು ಅಬಿ️üವೃದ್ಧಿಪಡಿಸಲ️ು ಅವರು ಪರೀಕ್ಷೆ ನಡೆಸಿದ್ದಾರೆ ಎನ್ನುವುದು ನಮ್ಮ ಶಂಕೆ. ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರ (ಐಸಿಎಂಆರ್) ನೈತಿಕ ಮಾರ್ಗಸೂಚಿ ಅನ್ವಯ ಅವರು ಮಾನವನ ಮೇಲೆ ನಡೆಸುವ ಯಾವುದೇ ಪರೀಕ್ಷೆಗೆ ಮುನ್ನ ಪೋಷಕರು ಮತ್ತು ವಿದ್ಯಾರ್ಥಿಗಳಿಂದ ಒಪ್ಪಿಗೆ ಪಡೆಯಬೇಕಿತ್ತು" ಎಂದು ಹೆಸರು ಬಹಿರಂಗಪಡಿಸಲ️ು ಇಚ್ಛಿಸದ ಪೋಷಕರೊಬ್ಬರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಐಐಟಿ-ಎಂ ತನಿಖೆ ನಡೆಸುವ ಸಲ️ುವಾಗಿ ಸತ್ಯಶೋಧನಾ ತಂಡ ರಚಿಸಿತ್ತು. "ಆಗಸ್ಟ್ 19ರಂದು ವನ ವಾಣಿ ಶಾಲೆಯಲ್ಲಿ, ವಾಣಿಜ್ಯವಾಗಿ ಕಾರ್ಯಸಾಧು ಎನಿಸಿದ ವಸ್ತುಗಳನ್ನು ಬಳಸಿಕೊಂಡು ಸಿದ್ಧಪಡಿಸಿದ ಸ್ಮಾರ್ಟ್ ಇನ್‍ಸೋಲ್‍ನ ವೆಚ್ಚದ ಕಾರ್ಯಸಾಧ್ಯತೆ ಬಗ್ಗೆ ಪರೀಕ್ಷೆ ನಡೆಸಲಾಗಿತ್ತು. ಇದು ಯಾವುದೇ ಕ್ಲಿನಿಕಲ್ ಟ್ರಯಲ್ ಅಥವಾ ವೈದ್ಯಕೀಯ ಸಂಬಂಧಿ ಸಾಧನವಲ️್ಲ" ಎಂದು ಐಐಟಿ-ಎಂ ಸಮರ್ಥಿಸಿಕೊಂಡಿದೆ.







