ಪ್ರಧಾನಿ ಹತ್ಯೆಯ ಬೆದರಿಕೆ ಬಳಿಕ ಹೆಚ್ಚಿನ ಭದ್ರತೆ

ನರೇಂದ್ರ ಮೋದಿ | photo: PTI
ಮುಂಬೈ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆಗೈಯುವುದಾಗಿ ಮತ್ತು ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣವನ್ನು ಸ್ಫೋಟಿಸುವುದಾಗಿ ಗುರುವಾರ ಬೆಳಿಗ್ಗೆ ಬಂದಿದೆ ಎನ್ನಲಾಗಿರುವ ಇ-ಮೇಲ್ ಬೆದರಿಕೆಯ ಹಿನ್ನೆಲೆಯಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ಸಜ್ಜಾಗಿರುವ ಮುಂಬೈ ನಗರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
500 ಕೋ.ರೂ.ಗಳನ್ನು ಪಾವತಿಸುವಂತೆ ಮತ್ತು ಬಂಧನದಲ್ಲಿರುವ ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ಣೋಯಿಯನ್ನು ಬಿಡುಗಡೆಗೊಳಿಸುವಂತೆಯೂ ಈ-ಮೇಲ್ ನಲ್ಲಿ ಬೇಡಿಕೆಯನ್ನು ಮಂಡಿಸಲಾಗಿದೆ. ಎನ್ಐಎ ಮುಂಬೈ ಪೊಲೀಸರಿಗೆ ಎಚ್ಚರಿಕೆಯನ್ನು ನೀಡಿದ್ದು,ಪ್ರಧಾನಿಯ ಭದ್ರತೆಯನ್ನು ನಿರ್ವಹಿಸುವ ಇತರ ಏಜೆನ್ಸಿಗಳನ್ನೂ ಕಟ್ಟೆಚ್ಚರದಲ್ಲಿರಿಸಲಾಗಿದೆ.
ಈ-ಮೇಲ್ ಮೂಲ ಸ್ಪಷ್ಟವಾಗಿಲ್ಲವಾದರೂ ಮುಂಬೈ ಪೊಲೀಸರು ವಿಶ್ವಕಪ್ ಪಂದ್ಯಗಳು ನಡೆಯಲಿರುವ ವಾಂಖಡೆ ಸ್ಟೇಡಿಯಂ ನಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.
Next Story





