ಭಾರತದಲ್ಲಿ ‘ಎಕ್ಸ್’ ಬಳಕೆದಾರರಿಗೆ ಶುಲ್ಕದಲ್ಲಿ ಭಾರೀ ಪ್ರಮಾಣದ ರಿಯಾಯಿತಿ

ಎಕ್ಸ್ | PC : X
ಹೊಸದಿಲ್ಲಿ: ಅಮೆರಿಕದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ರ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ಭಾರತದಲ್ಲಿರುವ ಬಳಕೆದಾರರಿಗೆ ತನ್ನ ಚಂದಾ ದರಗಳನ್ನು ಗಣನೀಯವಾಗಿ ಕಡಿಮೆಗೊಳಿಸಿದೆ. ಎಲ್ಲಾ ಮಾದರಿಯ ಖಾತೆಗಳ ಮಾಸಿಕ ಮತ್ತು ವಾರ್ಷಿಕ ಶುಲ್ಕಗಳಲ್ಲಿ ಶೇ. 48ರವರೆಗೆ ವಿನಾಯಿತಿಯನ್ನು ಘೋಷಿಸಲಾಗಿದೆ.
ಹೆಚ್ಚಿನ ಪ್ರಮಾಣದ ವಿನಾಯಿತಿಯನ್ನು ಮೊಬೈಲ್ ಬಳಕೆದಾರರ ಪ್ರೀಮಿಯಮ್ ಶುಲ್ಕಗಳಲ್ಲಿ ಘೋಷಿಸಲಾಗಿದೆ. ತಿಂಗಳಿಗೆ 900 ರೂ. ಇದ್ದ ಶುಲ್ಕವು ಈಗ 470ಕ್ಕೆ ಇಳಿದಿದೆ. ವೆಬ್ ಬಳಕೆದಾರರಿಗೆ ಈ ಶುಲ್ಕ ತಿಂಗಳಿಗೆ 427 ರೂ. ಆಗಿದ್ದು 34 ಶೇ. ಕಡಿತವಾಗಿದೆ. ಅದು ಮೊದಲು 650 ರೂ. ಆಗಿತ್ತು.
Next Story





