ಜೊತೆಯಾಗಿಯೇ ಸಂಸತ್ಗೆ ಆಗಮಿಸಿ ಒಗಟ್ಟು ಪ್ರದರ್ಶಿಸಿದ ಇಂಡಿಯಾ ಮೈತ್ರಿಕೂಟದ ಸಂಸದರು

Screengrab: X/@ANI
ಹೊಸದಿಲ್ಲಿ: ಹದಿನೆಂಟನೇ ಲೋಕಸಭಾ ಚುನಾವಣೆಯ ಪ್ರಥಮ ಅಧಿವೇಶನಕ್ಕೆ ಇಂದು ವಿಪಕ್ಷ ಇಂಡಿಯಾ ಮೈತ್ರಿಕೂಟದ ಎಲ್ಲಾ ಸಂಸದರೂ ಜೊತೆಯಾಗಿ ಆಗಮಿಸುವ ಮೂಲಕ ತಮ್ಮ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇಂಡಿಯಾ ಮೈತ್ರಿಕೂಟದ ಎಲ್ಲಾ ಸಂಸದರೂ ಸಂಸತ್ ಆವರಣದ ಹೊರಗಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಒಟ್ಟು ಸೇರಿದರಲ್ಲದೆ ಎಲ್ಲರೂ ತಮ್ಮ ಕೈಗಳಲ್ಲಿ ಸಂವಿಧಾನದ ಪ್ರತಿಗಳನ್ನೂ ಹಿಡಿದುಕೊಂಡಿದ್ದರು.
ಇದಕ್ಕೂ ಮುನ್ನ ಕಾಂಗ್ರೆಸ್ ಸಂಸದರೆಲ್ಲರೂ ಇಂದು ಪಾರ್ಲಿಮೆಂಟ್ ಹೌಸ್ನಲ್ಲಿರುವ ಕಾಂಗ್ರೆಸ್ ಸಂಸದೀಯ ಪಕ್ಷದ ಕಚೇರಿಯಲ್ಲಿ ಸಭೆ ಸೇರಿದರು.
ಇಂದಿನ ಪ್ರಥಮ ಸಂಸದ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕ್ಯಾಬಿನೆಟ್ ಸಚಿವರು ಸೇರಿದಂತೆ ಸಂಸದರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ನೂತನವಾಗಿ ಆಯ್ಕೆಯಾದ ಸಂಸದರನ್ನು ಸ್ವಾಗತಿಸಲು ಸಂಸತ್ತಿನ ಮಕರ್ ದ್ವಾರ್ನಲ್ಲಿ ಸ್ವಾಗತಂ ಕಟೌಟ್ ಇರಿಸಲಾಗಿದೆ.
#WATCH | Delhi: INDIA bloc leaders including Congress Parliamentary Party Chairperson Sonia Gandhi and Congress leader Rahul Gandhi, protest in Parliament premises pic.twitter.com/QoFKaoavR0
— ANI (@ANI) June 24, 2024
ಇಂದು ಸಂಸತ್ ಅಧಿವೇಶನದಲ್ಲಿ ವಿಪಕ್ಷಗಳು ಕೇಂದ್ರ ಸರ್ಕಾರವನ್ನು ಹಂಗಾಮಿ ಸ್ಪೀಕರ್ ಆಯ್ಕೆ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನೀಟ್ ಅವ್ಯವಹಾರಗಳ ಕುರಿತಂತೆ ತರಾಟೆಗೆ ತೆಗೆದುಕೊಳ್ಳುವ ನಿರೀಕ್ಷೆಯಿದೆ.







