2022ರಲ್ಲಿ ದೇಶದಲ್ಲಿ ದಿನವೊಂದಕ್ಕೆ 78 ಕೊಲೆ ಪ್ರಕರಣ ದಾಖಲು: ಎನ್ಸಿಆರ್ಬಿ ವರದಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: 2022 ರಲ್ಲಿ ಭಾರತದಲ್ಲಿ ಒಟ್ಟು 28,522 ಕೊಲೆಗಳು ನಡೆದಿರುವ ಎಫ್ಐಆರ್ಗಳು ದಾಖಲಾಗಿದ್ದು, ದೇಶದಲ್ಲಿ ಪ್ರತಿದಿನ ಸರಾಸರಿ 78 ಕೊಲೆಗಳು ನಡೆದಿದೆ. ಅಥವಾ ಪ್ರತಿ ಗಂಟೆಗೆ ಮೂರಕ್ಕಿಂತ ಹೆಚ್ಚು ಕೊಲೆಗಳು ನಡೆದಿದೆ.
2021 ರಲ್ಲಿ 29,272 ಕೊಲೆಗಳು ಮತ್ತು 2020 ರಲ್ಲಿ 29,193 ಕೊಲೆಗಳು ನಡೆದಿತ್ತು ಎಂದು NCRB ಡೇಟಾ ವರದಿಗಳು ಹೇಳಿವೆ.
2022 ರಲ್ಲಿ ವಿವಾದಗಳು ಅತಿ ಹೆಚ್ಚು ಕೊಲೆ ಪ್ರಕರಣಗಳಿಗೆ ಕಾರಣವಾಗಿದ್ದು, 9,962 ಪ್ರಕರಣಗಳು ದಾಖಲಾಗಿಚೆ. 3,761 ಪ್ರಕರಣಗಳು 'ವೈಯಕ್ತಿಕ ದ್ವೇಷʼ ಪ್ರಕರಣಗಳಾಗಿವೆ. 1,884 ಪ್ರಕರಣಗಳು 'ಲಾಭ'ದ ಉದ್ದೇಶದಿಂದ ನಡೆದಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ವಾರ್ಷಿಕ ಅಪರಾಧ ವರದಿಯಲ್ಲಿನ ಅಂಕಿಅಂಶಗಳು ತಿಳಿಸಿವೆ.
ಉತ್ತರ ಪ್ರದೇಶದಲ್ಲಿ 2022 ರಲ್ಲಿ 3,491 ಎಫ್ಐಆರ್ಗಳು ದಾಖಲಾಗಿದ್ದು, ನಂತರದ ಸ್ಥಾನದಲ್ಲಿ ಬಿಹಾರ (2,930), ಮಹಾರಾಷ್ಟ್ರ (2,295), ಮಧ್ಯಪ್ರದೇಶ (1,978) ಮತ್ತು ರಾಜಸ್ಥಾನ (1,834) ರಾಜ್ಯಗಳು ಇವೆ. ಈ ಅಗ್ರ ಐದು ರಾಜ್ಯಗಳಲ್ಲಿ ದೇಶದ ಒಟ್ಟು ಕೊಲೆ ಪ್ರಕರಣಗಳಲ್ಲಿ 43.92 ರಷ್ಟು ಪ್ರಕರಣಗಳು ವರದಿಯಾಗಿದೆ.
ಎನ್ಸಿಆರ್ಬಿ ಪ್ರಕಾರ, 2022 ರಲ್ಲಿ ಕಡಿಮೆ ಕೊಲೆ ಪ್ರಕರಣಗಳನ್ನು ಹೊಂದಿರುವ ಮೊದಲ ಐದು ರಾಜ್ಯಗಳು ಸಿಕ್ಕಿಂ (9), ನಾಗಾಲ್ಯಾಂಡ್ (21), ಮಿಜೋರಾಂ (31), ಗೋವಾ (44), ಮತ್ತು ಮಣಿಪುರ (47) ಆಗಿದೆ.
ಕೇಂದ್ರಾಡಳಿತ ಪ್ರದೇಶಗಳ ಪೈಕಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2022 ರಲ್ಲಿ 509 ಕೊಲೆ ಪ್ರಕರಣಗಳು ದಾಖಲಾಗಿದ್ದು, ನಂತರ ಜಮ್ಮು ಮತ್ತು ಕಾಶ್ಮೀರ (99), ಪುದುಚೇರಿ (30), ಚಂಡೀಗಢ (18), ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು (16), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (7), ಲಡಾಖ್ (5) ಮತ್ತು ಲಕ್ಷದ್ವೀಪ (0) ಕೊಲೆಗಳು ನಡೆದಿದೆ.
ಕೊಲೆಗೆ ಬಲಿಯಾದ 95.4 ಪ್ರತಿಶತ ವಯಸ್ಕರಾಗಿದ್ದು, ಒಟ್ಟು ಕೊಲೆಯಾದವರಲ್ಲಿ 8,125 ಮಹಿಳೆಯರಾಗಿದ್ದು, ಒಂಬತ್ತು ತೃತೀಯ ಲಿಂಗ ವ್ಯಕ್ತಿಗಳು ಬಲಿಯಾಗಿದ್ದಾರೆ.