ಭಾರತದ ಕಾನೂನು ವ್ಯವಸ್ಥೆಯನ್ನು ಸುಧಾರಣೆ ಮಾಡುವ ಅವಶ್ಯಕತೆಯಿದೆ : ಸಿಜೆಐ ಬಿ.ಆರ್. ಗವಾಯಿ

ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ (PTI)
ಹೈದರಾಬಾದ್: ಭಾರತೀಯ ಕಾನೂನು ವ್ಯವಸ್ಥೆ ವಿಶಿಷ್ಟ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ಅದನ್ನು ಸುಧಾರಣೆ ಮಾಡುವ ಅವಶ್ಯಕತೆಯಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಹೇಳಿದ್ದಾರೆ.
ಹೈದರಾಬಾದ್ನ ಜಸ್ಟೀಸ್ ಸಿಟಿಯಲ್ಲಿನ ʼನಲ್ಸರ್ ಕಾನೂನು ವಿಶ್ವವಿದ್ಯಾಲಯʼ (Nalsar University of Law)ದ ಘಟಿಕೋತ್ಸವದಲ್ಲಿ ಮಾತನಾಡಿದ ನ್ಯಾಯಮೂರ್ತಿ ಗವಾಯಿ, ವಿದ್ಯಾರ್ಥಿಗಳು ವಿದ್ಯಾರ್ಥಿವೇತನದ ಮೇಲೆ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಬೇಕು. ಕುಟುಂಬದ ಮೇಲೆ ಹಣಕಾಸಿನ ಒತ್ತಡ ಹೇರಬಾರದು ಎಂದು ಸಲಹೆ ನೀಡಿದರು.
ʼನಮ್ಮ ಕಾನೂನು ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯವಿದೆ. ನಮ್ಮ ದೇಶ ಮತ್ತು ಕಾನೂನು ವ್ಯವಸ್ಥೆಯು ವಿಶಿಷ್ಟ ಸವಾಲುಗಳನ್ನು ಎದುರಿಸುತ್ತಿದೆ. ವಿಚಾರಣೆಗಳಲ್ಲಿ ವಿಳಂಬ ಕೆಲವೊಮ್ಮೆ ದಶಕಗಳವರೆಗೆ ಹೋಗಬಹುದು. ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ವರ್ಷಗಳ ಕಾಲ ಕಳೆದ ಬಳಿಕ ನಿರಪರಾಧಿ ಎಂದು ಸಾಬೀತಾಗಿರುವ ಪ್ರಕರಣಗಳನ್ನೂ ನಾವು ನೋಡಿದ್ದೇವೆ. ನಮ್ಮ ಅತ್ಯುತ್ತಮ ಪ್ರತಿಭೆಯು ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ನಮಗೆ ಸಹಾಯ ಮಾಡಬಹುದುʼ ಎಂದು ಬಿ ಆರ್ ಗವಾಯಿ ಹೇಳಿದರು.





