ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಠೇವಣಿ ಮೂರು ಪಟ್ಟು ಹೆಚ್ಚಳ!
2024ರಲ್ಲಿ 37,600 ಕೋಟಿ ರೂ.ಗೆ ತಲುಪಿದ ಭಾರತೀಯರ ಠೇವಣಿ ಮೊತ್ತ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ : ಸ್ವಿಸ್ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿರುವ ಭಾರತೀಯರ ಹಣವು ಮೂರು ಪಟ್ಟು ಹೆಚ್ಚಾಗಿದೆ. 2024ರಲ್ಲಿ ಸ್ವಿಸ್ ಬ್ಯಾಂಕ್ನಲ್ಲಿ ಭಾರತೀಯರ ಠೇವಣಿ ಮೊತ್ತ 37,600 ಕೋಟಿ ರೂ.ಗೆ ತಲುಪಿದೆ ಎಂದು ಸ್ವಿಸ್ ನ್ಯಾಷನಲ್ ಬ್ಯಾಂಕ್ ಬಹಿರಂಗಪಡಿಸಿದೆ.
2023ರಲ್ಲಿ ಸ್ಥಳೀಯ ಶಾಖೆಗಳು ಮತ್ತು ಇತರ ಹಣಕಾಸು ಸಂಸ್ಥೆಗಳದ್ದು ಸೇರಿದಂತೆ ಸ್ವಿಸ್ ಬ್ಯಾಂಕ್ನಲ್ಲಿ ಭಾರತೀಯ ವ್ಯಕ್ತಿಗಳು ಮತ್ತು ಸಂಸ್ಥೆಗಳು ಇಟ್ಟಿದ್ದ ನಿಧಿಯಲ್ಲಿ ಶೇಕಡಾ 70ರಷ್ಟು ಕುಸಿತ ಕಂಡುಬಂದಿತ್ತು. ಇದು ನಾಲ್ಕು ವರ್ಷದಲ್ಲಿ ಕನಿಷ್ಠ 1.4 ಬಿಲಿಯನ್ ಸ್ಟಿಸ್ ಫ್ರಾಂಕ್ ಗೆ ತಲುಪಿತ್ತು. ಇದೀಗ ಈ ನಿಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ.
2021ರ ನಂತರ ಸ್ವಿಸ್ನ ಸ್ಥಳೀಯ ಬ್ರ್ಯಾಂಚ್ ಮತ್ತು ಇತರೆ ಆರ್ಥಿಕ ಸಂಸ್ಥೆಗಳಲ್ಲಿ ಭಾರತೀಯ ಗ್ರಾಹಕರು ಇಟ್ಟಿರುವ ಠೇವಣಿ ಮೊತ್ತ ಶೇ.11ರಷ್ಟು ಏರಿಕೆಯಾಗಿದೆ. ಇದು ಬ್ಯಾಂಕ್ನ ಒಟ್ಟಾರೆ ನಿಧಿಯ ಹತ್ತನೇ ಒಂದು ಭಾಗದಷ್ಟಿದೆ.
ಸ್ವಿಸ್ ಸೆಂಟ್ರಲ್ ಬ್ಯಾಂಕಿನ ಈ ವರದಿಯು ಕಪ್ಪು ಹಣದ ಅಂಕಿ-ಅಂಶ ಅಲ್ಲ. ಕಪ್ಪು ಹಣದ ಬಗ್ಗೆ ವರದಿಯಲ್ಲಿ ಸೇರಿಸಿಲ್ಲ.





