ಡಾಲರ್ ಎದುರು ರೂಪಾಯಿ ಮೌಲ್ಯ ಅಲ್ಪ ಹೆಚ್ಚಳ

Photo Credit: freepik.com
ಮುಂಬೈ, ಫೆ. 3: ಮಂಗಳವಾರದ ವ್ಯವಹಾರದಲ್ಲಿ ಭಾರತೀಯ ರೂಪಾಯಿಯು ಅಮೆರಿಕದ ಡಾಲರ್ ವಿರುದ್ಧ 119 ಪೈಸೆ ಹೆಚ್ಚಿಸಿಕೊಂಡು 90.30 ರೂ.ಗೆ ಏರಿಕೆಯಾಗಿದೆ. ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಸುಂಕವನ್ನು ಅಮೆರಿಕವು 50 ಶೇಕಡದಿಂದ 18 ಶೇಕಡಕ್ಕೆ ಇಳಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
18 ಶೇಕಡ ಸುಂಕವು ಪರಿಸ್ಥಿತಿಯನ್ನು ಬದಲಾಯಿಸುತ್ತದೆ ಎಂದು ಫಾರೆಕ್ಸ್ (ವಿದೇಶಿ ವಿನಿಮಯ) ವ್ಯಾಪಾರಿಗಳು ಹೇಳುತ್ತಾರೆ. ಇದು ಭಾರತದ ಸ್ಥಿತಿಯನ್ನು ಸುಧಾರಿಸುತ್ತದೆ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ (ಎಫ್ಐಐ) ಭಾರತೀಯ ಮಾರುಕಟ್ಟೆಯ ಬಾಗಿಲನ್ನು ಮತ್ತೆ ತೆರೆಯುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.
ಇಂಟರ್ಬ್ಯಾಂಕ್ ಫಾರೀನ್ ಎಕ್ಸ್ಚೇಂಜ್ ಮಾರುಕಟ್ಟೆಯಲ್ಲಿ ಮಂಗಳವಾರ ಬೆಳಗ್ಗೆ ರೂಪಾಯಿ ವ್ಯವಹಾರ ಡಾಲರ್ಗೆ 90.30ಯಲ್ಲಿ ಆರಂಭಗೊಂಡಿತು. ಹಿಂದಿನ ದಿನದ ವ್ಯವಹಾರ ಮುಕ್ತಾಯಕ್ಕೆ ರೂಪಾಯಿ ಬೆಲೆಯು ಡಾಲರ್ಗೆ 91.49 ಆಗಿತ್ತು.
Next Story





