ಡಿ.7ರ ರಾತ್ರಿ 8 ಗಂಟೆಯೊಳಗೆ ಪೂರ್ಣ ಟಿಕೆಟ್ ದರ ಮರುಪಾವತಿ ಮಾಡಿ: IndiGoಗೆ ಸರಕಾರ ಆದೇಶ

Photo Credit : PTI
ಹೊಸದಿಲ್ಲಿ: ಸಾವಿರಾರು ವಿಮಾನಯಾನಗಳ ರದ್ದತಿಯ ಹಿನ್ನೆಲೆಯಲ್ಲಿ, ಪ್ರಯಾಣಿಕರ ಟಿಕೆಟ್ ಮೊತ್ತವನ್ನು ರವಿವಾರ ರಾತ್ರಿ 8 ಗಂಟೆಯ ಒಳಗೆ ಮರುಪಾವತಿಸುವಂತೆ ನಾಗರಿಕ ವಾಯಯಾನ ಸಚಿವಾಲಯವು ಶನಿವಾರ ಇಂಡಿಗೋ ವಿಮಾನಯಾನ ಸಂಸ್ಥೆಗೆ ಆದೇಶ ನೀಡಿದೆ.
ಈ ನಿರ್ದೇಶನವನ್ನು ಪಾಲಿಸಲು ವಿಫಲವಾದರೆ ‘‘ತಕ್ಷಣ ನಿಯಂತ್ರಣ ಕ್ರಮ’’ವನ್ನು ತೆಗೆದುಕೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ಅದು ನೀಡಿದೆ.
ಯಾರ ಯಾನಗಳು ರದ್ದಾಗಿವೆಯೋ ಆ ಪ್ರಯಾಣಿಕರಿಗೆ ಅವರ ಮೂಲ ಪಾವತಿ ವಿಧಾನಕ್ಕೆ ಟಿಕೆಟ್ ನ ಪೂರ್ಣ ಮೊತ್ತ ಮರುಪಾವತಿಯಾಗುತ್ತದೆ. ವಿಮಾನಯಾನವನ್ನು ಮರುನಿಗದಿಪಡಿಸಲು ಇಂಡಿಗೋ ಯಾವುದೇ ಶುಲ್ಕವನ್ನು ಕಡಿತಗೊಳಿಸುವಂತಿಲ್ಲ.
ಅದೇ ವೇಳೆ, ಯಾನಗಳ ವಿಳಂಬ ಅಥವಾ ರದ್ದತಿಯಿಂದಾಗಿ ಪ್ರಯಾಣಿಕರಿಂದ ಬೇರ್ಪಡೆಗೊಂಡಿರುವ ಎಲ್ಲಾ ಬ್ಯಾಗ್ ಗಳನ್ನು ಪತ್ತೆ ಹಚ್ಚಿ ಅವರ ನಿವಾಸಗಳಿಗೆ ಅಥವಾ ಅವರು ತಿಳಿಸುವ ವಿಳಾಸಗಳಿಗೆ ಮುಂದಿನ 48 ಗಂಟೆಗಳ ಒಳಗೆ ತಲುಪಿಸುವಂತೆಯೂ ಸಚಿವಾಲಯವು ಇಂಡಿಗೋಗೆ ಸೂಚಿಸಿದೆ.
Next Story





