ತಾಂತ್ರಿಕ ದೋಷ | ಪಾಟ್ನಾಕ್ಕೆ ಹಿಂದಿರುಗಿದ ಇಂಡಿಗೊ ವಿಮಾನ

ಇಂಡಿಗೊ ವಿಮಾನ | PTI
ಪಾಟ್ನಾ: ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದಿಲ್ಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಬುಧವಾರ ಬೆಳಗ್ಗೆ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಪಾಟ್ನಾದ ಜಯಪ್ರಕಾಶ್ ನಾರಾಯಣ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಿಂದಿರುಗಿತು.
ವಿಮಾನಕ್ಕೆ ಹಕ್ಕಿ ಬಡಿದಿರುವುದರಿಂದ ಅದರ ಒಂದು ಎಂಜಿನ್ ನಲ್ಲಿ ದೋಷ ಕಾಣಿಸಿಕೊಂಡಿತ್ತು. ಈ ವಿಮಾನದಲ್ಲಿ 175 ಪ್ರಯಾಣಿಕರು ಇದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಪಾಟ್ನಾದಿಂದ ದಿಲ್ಲಿಗೆ ತೆರಳುತ್ತಿದ್ದ ಐಜಿಒ5009 ಬೆಳಗ್ಗೆ 8.42ಕ್ಕೆ ಹಾರಾಟ ಆರಂಭಿಸಿದ ಸಂದರ್ಭ ಹಕ್ಕಿ ಢಿಕ್ಕಿಯಾಗಿದೆ. ಪರಿಶೀಲನೆ ವೇಳೆ ರನ್ವೇಯಲ್ಲಿ ಸತ್ತ ಹಕ್ಕಿಯೊಂದು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.
ಅನಂತರ ವಿಮಾನ ಯಾನ ಸಂಸ್ಥೆ ಇನ್ನೊಂದು ವಿಮಾನದಲ್ಲಿ ಪ್ರಯಾಣಿಕರನ್ನು ಕಳುಹಿಸಿ ಕೊಟ್ಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story





