ಹೇಮಮಾಲಿನಿ ವಿರುದ್ಧ ಅವಮಾನಕರ ಹೇಳಿಕೆ | ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಚುನಾವಣಾ ಪ್ರಚಾರಕ್ಕೆ 48 ಗಂಟೆ ನಿರ್ಬಂಧ

ರಣದೀಪ್ ಸುರ್ಜೇವಾಲಾ , ಹೇಮಾ ಮಾಲಿನಿ | Pc : PTI
ಹೊಸದಿಲ್ಲಿ : ಬಿಜೆಪಿ ಸಂಸದೆ ಹೇಮಾ ಮಾಲಿನಿ ವಿರುದ್ಧ ಅವಮಾನಕರ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಅವರಿಗೆ ಚುನಾವಣಾ ಆಯೋಗ ಮಂಗಳವಾರ 48 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ನಿರ್ಬಂಧ ವಿಧಿಸಿದೆ.
ಈ ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಚುನಾವಣಾ ಆಯೋಗ ವಿಧಿಸುತ್ತಿರುವ ಮೊದಲ ಪ್ರಚಾರ ನಿಷೇಧ ಇದಾಗಿದೆ.
ಹೇಮಮಾಲಿನಿ ವಿರುದ್ಧ ಅಗೌರವ, ಅನಾಗರಿಕ, ಅಸಭ್ಯ ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿ ಚುನಾವಣಾ ಆಯೋಗ ಸುರ್ಜೇವಾಲ ಅವರಿಗೆ ಕಳೆದ ಮಂಗಳವಾರ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.
ಸುರ್ಜೇವಾಲ್ ಅವರ ಪ್ರತಿಕ್ರಿಯೆಯನ್ನು ಪರಿಶೀಲಿಸಿದ ಬಳಿಕ ಚುನಾವಣಾ ಆಯೋಗ ಅವರ ಹೇಳಿಕೆಯನ್ನು ಖಂಡಿಸಿದೆ ಹಾಗೂ ದುರ್ನಡತೆಗೆ ಛೀಮಾರಿ ಹಾಕಿದೆ.
Next Story





