ತನಿಖಾ ಸಂಸ್ಥೆಗಳು ಕಾನೂನುಪ್ರಕಾರವೇ ಕಾರ್ಯಾಚರಿಸುತ್ತಿವೆ: ಅನುರಾಗ್

ಅನುರಾಗ್ ಠಾಕೂರ್ | Photo: PTI
ಹೊಸದಿಲ್ಲಿ : ನ್ಯೂಸ್ ಕ್ಲಿಕ್ ಸುದ್ದಿಜಾಲತಾಣಕ್ಕೆ ಸಂಬಂಧಿಸಿದ ಪತ್ರಕರ್ತರ ನಿವಾಸಗಳ ಮೇಲೆ ಮಂಗಳವಾರ ದಿಲ್ಲಿ ಪೊಲೀಸರು ನಡೆಸಿದ ದಾಳಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅನುರಾಗ್ ಠಾಕೂರ್ ಅವರು, ತನಿಖಾ ಏಜೆನ್ಸಿಗಳು ಸ್ವತಂತ್ರವಾಗಿದ್ದು, ಅವು ಕಾನೂನು ಪ್ರಕಾರವಾಗಿಯೇ ಕಾರ್ಯನಿರ್ವಹಿಸುತ್ತವೆ’’ ಎಂದು ಹೇಳಿದ್ದಾರೆ.
‘‘ ದಿಲ್ಲಿ ಪೊಲೀಸರ ದಾಳಿಯನ್ನು ನಾನು ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ. ಒಂದು ವೇಳೆ ಯಾರಾದರೂ ತಪ್ಪು ಮಾಡಿದಲ್ಲಿ ತನಿಖಾ ಏಜೆನ್ಸಿಗಳು ಅವರ ವಿರುದ್ಧ ಕಾರ್ಯಪ್ರವೃತ್ತವಾಗುತ್ತವೆ. ಒಂದು ವೇಳೆ ನೀವು ತಪ್ಪು ಮಾರ್ಗದಿಂದ ಸಂಪತ್ತನ್ನು ಗಳಿಸಿದ್ದಲ್ಲಿ ಹಾಗೂ ಅಪರಾಧವನ್ನು ಎಸಗಿದ್ದಲ್ಲಿ ತನಿಖಾ ಏಜೆನ್ಸಿಗಳು ಸೂಕ್ತ ಕ್ರಮ ಕೈಗೊಳ್ಳುತ್ತವೆ’’ ಎಂದು ಠಾಕೂರ್ ತಿಳಿಸಿದ್ದಾರೆ.
Next Story





