ಐಪಿಎಲ್-2024 | 20ನೇ ಓವರ್ ನಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಧೋನಿಗೆ ಅಗ್ರಸ್ಥಾನ

ಎಂ.ಎಸ್. ಧೋನಿ | PC : X
ಚೆನ್ನೈ : ಲಕ್ನೊದ ಎಕಾನಾ ಕ್ರಿಕೆಟ್ ಸ್ಟೇಡಿಯಮ್ ನಲ್ಲಿ ಶುಕ್ರವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೊ ಸೂಪರ್ ಜಯಂಟ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಕೊನೆಯ ಓವರ್ನಲ್ಲಿ ಎಂ.ಎಸ್. ಧೋನಿ 16 ರನ್ ಸಿಡಿಸಿದ್ದಾರೆ.
9 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿಗಳನ್ನು ಸಿಡಿಸಿದ ಧೋನಿ ಔಟಾಗದೆ 28 ರನ್ ಗಳಿಸಿದರು.
ಧೋನಿ ಈ ವರ್ಷದ ಐಪಿಎಲ್ ಋತುವಿನಲ್ಲಿ ಇನಿಂಗ್ಸ್ವೊಂದರ 20ನೇ ಓವರ್ ನಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
42ರ ಹರೆಯದ ಧೋನಿ ಈ ವರ್ಷದ ಐಪಿಎಲ್ ನಲ್ಲಿ ನಾಲ್ಕು ಬಾರಿ ಕೊನೆಯ ಓವರ್ ಆಡಿದ್ದಾರೆ. ಧೋನಿ ಎದುರಿಸಿದ 16 ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿದ್ದಾರೆ.
ಸಿಎಸ್ ಕೆ ತಂಡದ ಮಾಜಿ ನಾಯಕ ಧೋನಿ ಐಪಿಎಲ್ ಇತಿಹಾಸದಲ್ಲಿ ಈಗಾಗಲೇ ಕೊನೆಯ ಓವರ್ ನಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಧೋನಿ 99 ಇನಿಂಗ್ಸ್ ಗಳಲ್ಲಿ ಎದುರಿಸಿದ 313 ಎಸೆತಗಳಲ್ಲಿ 772 ರನ್ ಗಳಿಸಿದ್ದಾರೆ. ಐಪಿಎಲ್ನ 20ನೇ ಓವರ್ನಲ್ಲಿ ಅತ್ಯಂತ ಹೆಚ್ಚು ಸಿಕ್ಸರ್ ಗಳನ್ನು(65)ಸಿಡಿಸಿದ್ದಾರೆ.
ಐಪಿಎಲ್ 2024ರ 20ನೇ ಓವರ್ ನಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರು
1) ಎಂ.ಎಸ್. ಧೋನಿ-57 ರನ್, 16 ಎಸೆತ, ಆರು ಸಿಕ್ಸರ್, 356.25 ಸ್ಟ್ರೈಕ್ರೇಟ್
2) ರೊಮಾರಿಯೊ ಶೆಫರ್ಡ್-47 ರನ್, 13 ಎಸೆತ, 5 ಸಿಕ್ಸರ್, 361.33 ಸ್ಟ್ರೈಕ್ರೇಟ್
3) ದಿನೇಶ್ ಕಾರ್ತಿಕ್-39 ರನ್, 14 ಎಸೆತ, 4 ಸಿಕ್ಸರ್, 278.57 ಸ್ಟ್ರೈಕ್ರೇಟ್







