ಉತ್ತರ ಪ್ರದೇಶದ ರಾಂಪುರದ ತಾಂಡಾದಲ್ಲಿ 'ಐಎಸ್ಐ ಏಜೆಂಟ್' ಬಂಧನ

ಶಹಝಾದ್ (Photo: X/ANI)
ರಾಂಪುರ: ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ನ ಏಜೆಂಟ್ ಆಗಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆಯಿಂದ ರವಿವಾರ ಇಲ್ಲಿನ ತಾಂಡಾ ನಿವಾಸಿಯೊಬ್ಬನನ್ನು ಬಂಧಿಸಿದೆ.
ಐಎಸ್ಐಗಾಗಿ ಗಡಿಯಾಚೆಗಿನ ಕಳ್ಳಸಾಗಣೆ ಮತ್ತು ಬೇಹುಗಾರಿಕೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಮಾಹಿತಿಯ ನಂತರ ಎಸ್ಟಿಎಫ್ ಮೊರಾದಾಬಾದ್ ಘಟಕವು ಶಹಝಾದ್ ಎಂಬಾತನನ್ನು ಬಂಧಿಸಿದೆ.
ಶಹಝಾದ್ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ತನ್ನ ಐಎಸ್ಐಗೆ ರವಾನಿಸುತ್ತಿದ್ದನೆಂದು ಎಸ್ಟಿಎಫ್ ತಿಳಿಸಿದೆ.
ಶಹಝಾದ್ ವರ್ಷಗಳಲ್ಲಿ ಹಲವಾರು ಬಾರಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದು, ಗಡಿಯುದ್ದಕ್ಕೂ ಸೌಂದರ್ಯವರ್ಧಕಗಳು, ಬಟ್ಟೆ, ಮಸಾಲೆಗಳು ಮತ್ತು ಇತರ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದನೆಂದು ಸಂಸ್ಥೆ ಆರೋಪಿಸಿದೆ.
ಲಕ್ನೋದ ಎಸ್ಟಿಎಫ್ ಪೊಲೀಸ್ ಠಾಣೆಯಲ್ಲಿ ಶಹಝಾದ್ ವಿರುದ್ಧ ಬೇಹುಗಾರಿಕೆಗೆ ಸಂಬಂಧಿಸಿದ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
Next Story





