ಜಗನ್ ಮೋಹನ್ ರೆಡ್ಡಿ ಕಾರಿನಡಿಗೆ ಬಿದ್ದು ವೈಎಸ್ಆರ್ಸಿಪಿ ಕಾರ್ಯಕರ್ತ ಮೃತ್ಯು
ರೆಡ್ಡಿಗೆ ಹೂವುಗಳನ್ನು ಸುರಿದು ಸ್ವಾಗತಿಸಲು ಮುಂದಾದಾಗ ಆಕಸ್ಮಿಕ ಘಟನೆ

PC : X \ @ghoshi_manjeet
ಗುಂಟೂರು : ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ವೈಎಸ್ಆರ್ಸಿಪಿ ಬೆಂಬಲಿಗನೋರ್ವ ಮಾಜಿ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಪ್ರಯಾಣಿಸುತ್ತಿದ್ದ ಕಾರು ಹರಿದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಚೀಲಿ ಸಿಂಗಯ್ಯ(55) ಮೃತರು. ಜಗನ್ ಮೋಹನ್ ರೆಡ್ಡಿ ಅವರ ಮೇಲೆ ಹೂವುಗಳನ್ನು ಸುರಿಯಲು ಯತ್ನಿಸುವಾಗ ಆಯತಪ್ಪಿ ಬಿದ್ದು ಕಾರಿನ ಬಲ ಬದಿಯ ಚಕ್ರವು ಅವರ ಕುತ್ತಿಗೆಯ ಮೇಲೆ ಹರಿದಿದೆ ಎಂದು ತಿಳಿದು ಬಂದಿದೆ.
ಘಟನೆ ನಡೆದ ತಕ್ಷಣ ಪೊಲೀಸರು ಮತ್ತು ವೈಎಸ್ಆರ್ಸಿಪಿ ಬೆಂಬಲಿಗರು ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರು. ಆದರೆ ಅವರು ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಗುಂಟೂರು ಪೊಲೀಸ್ ವರಿಷ್ಠಾಧಿಕಾರಿ ಎಸ್. ಸತೀಶ್ ಕುಮಾರ್ ತಿಳಿಸಿದ್ದಾರೆ.
ಜಗನ್ ಅವರ ಬೆಂಗಾವಲು ವಾಹನದಿಂದ ಬಿದ್ದು ಚೀಲಿ ಸಿಂಗಯ್ಯ ಮೃತಪಟ್ಟಿದ್ದಾರೆ ಎಂದು ಆರಂಭದಲ್ಲಿ ಅಂದಾಜಿಸಲಾಗಿತ್ತು. ಜಗನ್ ಪ್ರಯಾಣಿಸುತ್ತಿದ್ದ ವಾಹನದಡಿ ಬಿದ್ದಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ಸಿಂಗಯ್ಯ ವೆಂಗಲಾಯಪಲೆಂ ಗ್ರಾಮದ ನಿವಾಸಿಯಾಗಿದ್ದು, ಜಗನ್ ಅವರನ್ನು ಸ್ವಾಗತಿಸಲು ಹೋಗಿದ್ದರು ಎಂದು ಹೇಳಲಾಗಿದೆ.
Horrifying visuals :- Ex-Chief Minister of Andhra Pradesh Jagan Reddys car runs over bystander in rally.
— Manjeet Ghoshi (@ghoshi_manjeet) June 22, 2025
“रैली या जनसभा में अधिक जोश में ना आए आपके पीछे आपका परिवार भी है”
Pray for his Safety and recovery ❤️ pic.twitter.com/xLKpAy8lIx







