ಜಮ್ಮುಕಾಶ್ಮೀರ: ಗುಂಡಿನ ಕಾಳಗ ದಲ್ಲಿ ಯೋಧನ ಮೃತ್ಯು

ಸಾಂದರ್ಭಿಕ ಚಿತ್ರ | PC : PTI
ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೊರೆ ಪ್ರದೇಶದ ಜಾಲೋರದಲ್ಲಿ ಶಂಕಿತ ಉಗ್ರರೊಂದಿಗೆ ನಡೆಯುತ್ತಿರುವ ಗುಂಡಿನ ಕಾಳಗದಲ್ಲಿ ಸೋಮವಾರ ಓರ್ವ ಯೋಧ ಮೃತಪಟ್ಟಿದ್ದಾನೆ.
ಶಂಕಿತ ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಗಾಯಗೊಂಡಿದ್ದ. ಆತನನ್ನು ಶ್ರೀನಗರದ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಆತ ಅಲ್ಲಿ ಮೃತಪಟ್ಟ ಎಂದು ಮೂಲಗಳು ತಿಳಿಸಿವೆ.
ಅಲ್ಲಿ ಶಂಕಿತರ ಉಗ್ರರ ಇರುವಿಕೆಯ ಕುರಿತು ಮಾಹಿತಿ ಸ್ವೀಕರಿಸಿದ ಬಳಿಕ ರವಿವಾರ ಅಪರಾಹ್ನ ಸೋಪೊರೆ ಪ್ರದೇಶದ ಜಾಲೋರದ ಗುಜಾರಪಟ್ಟುವಿನಲ್ಲಿ ಪೊಲೀಸ್, ಸಿಆರ್ಪಿಎಫ್ ಹಾಗೂ ಸೇನೆಯ ತುಕುಡಿ ಜಂಟಿಯಾಗಿ ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆಯ ಸಂದರ್ಭ ಭದ್ರತಾ ಪಡೆ ಉಗ್ರರ ಅಡಗುತಾಣಗಳನ್ನು ಬೇಧಿಸಿತು. ಈ ಸಂದರ್ಭ ಶಂಕಿತ ಉಗ್ರರು ಗುಂಡಿನ ದಾಳಿ ನಡೆಸಿದರು. ಯೋಧರು ಪ್ರತಿ ದಾಳಿ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ರಾತ್ರಿಯ ವಿಶ್ರಾಂತಿಯ ನಂತರ ಇಂದು ಮುಂಜಾನೆ ಗುಂಡಿನ ಕಾಳಗ ಮತ್ತೆ ಆರಂಭವಾಯಿತು. ಗುಂಡಿನ ಕಾಳಗ ಈಗಲೂ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರದೇಶದಲ್ಲಿ ಅಡಗಿರುವ ಶಂಕಿತ ಉಗ್ರರ ಚಲನವಲನಗಳ ಮೇಲೆ ನಿಗಾ ಇಡಲು ವೈಮಾನಿಕ ಕಣ್ಗಾವಲಿಗೆ ಭದ್ರತಾ ಪಡೆ ಡ್ರೋನ್ಗಳನ್ನು ಬಳಸುತ್ತಿದೆ ಎಂದು ಅವರು ತಿಳಿಸಿದ್ದಾರೆ.