ಜಮ್ಮುಕಾಶ್ಮೀರ: ಗಣರಾಜ್ಯೋತ್ಸವ ನಡೆಯುವ ಸ್ಥಳಕ್ಕೆ ಬಾಂಬ್ ಬೆದರಿಕೆ

PC : PTI
ಜಮ್ಮು : ಜಮ್ಮುವಿನ ಗಣರಾಜ್ಯೋತ್ಸವ ನಡೆಯುವ ಪ್ರಧಾನ ಸ್ಥಳಕ್ಕೆ ಬಾಂಬ್ ಬೆದರಿಕೆ ಒಡ್ಡಲಾಗಿದ್ದು, ಕೂಲಂಕಷ ತನಿಖೆ ನಡೆಸಿದ ಬಳಿಕ ಅದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದು ಬಂತು.
ಈ ಬಾಂಬ್ ಬೆದರಿಕೆ ಶನಿವಾರ ಈ ಮೇಲ್ ಮೂಲಕ ಸ್ವೀಕರಿಸಲಾಗಿತ್ತು. ಅನಂತರ ಅದು ಹುಸಿ ಬಾಂಬ್ ಬೆದರಿಕೆ ಎಂಬುದು ತಿಳಿದು ಬಂತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಣರಾಜ್ಯೋತ್ಸವ ನಡೆಯುವ ಮುಖ್ಯ ಸ್ಥಳವಾದ ಎಂ.ಎ. ಕ್ರೀಡಾಂಗಣದಲ್ಲಿ ಲೆಫ್ಟಿನೆಂಟ್ ಮನೋಜ್ ಸಿನ್ಹಾ ರಾಷ್ಟ್ರ ಧ್ವಜವನ್ನು ಆರೋಹಣ ಮಾಡಲಿದ್ದರು. ಅಲ್ಲದೆ, ಪಥ ಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಲಿದ್ದರು. ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದರು.
‘ದಿಶೆ ಲಿಶ್’ ಬಳಕೆದಾರರ ಹೆಸರಿನಲ್ಲಿ ಉನ್ನತ ಶಿಕ್ಷಣದ ಕಾರ್ಯದರ್ಶಿ, ಉನ್ನತ ಶಿಕ್ಷಣದ ನಿರ್ದೇಶಕರು ಸೇರಿದಂತೆ ವಿವಿಧ ವಿಭಾಗಗಳ ಅಧಿಕೃತ ಈ ಮೇಲ್ ಖಾತೆ ಶನಿವಾರ ರಾತ್ರಿ ಬೆದರಿಕೆಯ ಈ ಮೇಲ್ ಸ್ವೀಕರಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story





