ಜಮ್ಮು-ಕಾಶ್ಮೀರ: ಭಯೋತ್ಪಾದಕರ ಇಬ್ಬರು ಬೆಂಬಲಿಗರ ಬಂಧನ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಭಯೋತ್ಪಾದಕರ ಇಬ್ಬರು ಬೆಂಬಲಿಗರನ್ನು ಭದ್ರತಾ ಪಡೆ ಜಮ್ಮು ಹಾಗೂ ಕಾಶ್ಮೀರದ ಕುಲ್ಗಾಂವ್ ನಿಂದ ಶನಿವಾರ ಮುಂಜಾನೆ ಬಂಧಿಸಿದೆ.
ಪಹಲ್ಗಾಮ್ ನಲ್ಲಿ 26 ಜನರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿ ನಡೆದ ದಿನಗಳ ಬಳಿಕ ಈ ಬಂಧನ ನಡೆದಿದೆ.
ಬೇಹುಗಾರಿಕೆ ಮಾಹಿತಿಯ ಆಧಾರದಲ್ಲಿ ಭದ್ರತಾ ಪಡೆಗಳು ಇವರಿಬ್ಬರನ್ನು ಕುಲ್ಗಾಂವ್ ನ ತೊಕೆರ್ಪೋರಾದಿಂದ ಬಂಧಿಸಿದೆ ಎಂದು ವರದಿ ತಿಳಿಸಿದೆ.
Next Story





