ಜಮ್ಮುಕಾಶ್ಮೀರ | ಆಪರೇಶನ್ ಅಕಾಲ್: ಹತ್ಯೆಯಾದ ಉಗ್ರರ ಸಂಖ್ಯೆ 6ಕ್ಕೇರಿಕೆ

Photo Credit: PTI
ಶ್ರೀನಗರ,ಆ.3: ಜಮ್ಮುಕಾಶ್ಮೀರದಲ್ಲಿ ಭದ್ರತಾ ಪಡೆಗಳ ನಡೆಸಿದ ‘ಆಪರೇಶನ್ ಅಕಾಲ್’ ಕಾರ್ಯಾಚರಣೆ ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ. ಈ ಸಂದರ್ಭ ನಡೆದ ಘರ್ಷಣೆಯಲ್ಲಿ ಓರ್ವ ಸೈನಿಕನಿಗೆ ಗಾಯಗಳಾಗಿವೆ. ಇದರೊಂದಿಗೆ ದಕ್ಷಿಣ ಕಾಶ್ಮೀರದ ಕುಲಗಾಂವ್ ಜಿಲ್ಲೆಯಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಆಪರೇಷನ್ ಅಕಾಲ್ ಕಾರ್ಯಾಚರಣೆಯಲ್ಲಿ ಹತ್ಯೆಯಾದ ಉಗ್ರರ ಸಂಖ್ಯೆ 6ಕ್ಕೇರಿದೆ.
ಶನಿವಾರ ರಾತ್ರಿಯಿಡೀ ಉಗ್ರಗಾಮಿಗಳು ಹಾಗೂ ಜಮ್ಮುಕಾಶ್ಮೀರ ಪೊಲೀಸ್, ಸೇನೆ ಹಾಗೂ ಸಿಆರ್ಪಿಎಫ್ ಯೋಧರ ಜಂಟಿ ತಂಡದ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಭಾರೀ ಸ್ಪೋಟದ ಸದ್ದುಗಳು ಕೂಡಾ ಕೇಳಿಬಂದಿವೆ. ರವಿವಾರವೂ ಘರ್ಷಣೆ ಮುಂದುವರಿರುವುದಾಗಿ ತಿಳಿದುಬಂಮದಿದೆ.
ಉಗ್ರರು ಇರುವ ಬಗ್ಗೆ ಗುಪ್ತಚರ ಮಾಹಿತಿಗಳು ಬಂದ ಬಳಿಕ ಭದ್ರತಾಪಡೆಗಳು ಶುಕ್ರವಾರ ಕುಲಗಾಂವ್ ನ ಅಕಾಲ್ ಅರಣ್ಯ ಪ್ರದೇಶವನ್ನು ಸುತ್ತುವರಿದು ಶೋಧಕಾರ್ಯಾಚರಣೆಯನ್ನು ನಡೆಸಿದವು. ಅರಣ್ಯದಲ್ಲಿ ಅವಿತುಕೊಂಡಿದ್ದ ಉಗ್ರರು ಭದ್ರತಾಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದಾಗ ಎನ್ಕೌಂಟರ್ ಆರಂಭಗೊಂಡಿತು ಎಂದು ಮೂಲಗಳು ತಿಳಿಸಿವೆ.





