ಜಮ್ಮುಕಾಶ್ಮೀರ | ಸರಕಾರಿ ಕಚೇರಿಗಳಲ್ಲಿ ಯುಎಸ್ಬಿ, ಪೆನ್ ಡ್ರೈವ್ಗಳಿಗೆ ನಿಷೇಧ

ಸಾಂದರ್ಭಿಕ ಚಿತ್ರ
ಶ್ರೀನಗರ,ಆ.25: ಜಮ್ಮುಕಾಶ್ಮೀರ ಸರಕಾರವು ಎಲ್ಲ ಆಡಳಿತಾತ್ಮಕ ಸರಕಾರಿ ಕಚೇರಿಗಳ ಅಧಿಕೃತ ಸಾಧನಗಳಲ್ಲಿ ಯು ಎಸ್ ಬಿ ಮತ್ತು ಪೆನ್ ಡ್ರೈವ್ ಬಳಕೆಯನ್ನು ನಿಷೇಧಿಸಿದೆ.
ಸೂಕ್ಷ್ಮ ಸರಕಾರಿ ಮಾಹಿತಿಗಳನ್ನು ರಕ್ಷಿಸಲು ಮತ್ತು ಡೇಟಾ ಉಲ್ಲಂಘನೆಗಳ ಅಪಾಯವನ್ನು ಕಡಿಮೆ ಮಾಡಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅದು ತಿಳಿಸಿದೆ.
ಸರಕಾರದ ಆಯುಕ್ತ ಕಾರ್ಯದರ್ಶಿ ಎಂ.ರಾಜು ಹೊರಡಿಸಿರುವ ಅಧಿಕೃತ ಆದೇಶದ ಪ್ರಕಾರ ಜಮ್ಮುಕಾಶ್ಮೀರದಲ್ಲಿ ಸೈಬರ್ ಭದ್ರತೆಯನ್ನು ಹೆಚ್ಚಿಸುವುದು ಈ ಕ್ರಮದ ಉದ್ದೇಶವಾಗಿದೆ.
ಕಾರ್ಯ ನಿರ್ವಹಣೆಗೆ ಅತ್ಯಗತ್ಯವಾಗಿರುವ ಅಸಾಧಾರಣ ಪ್ರಕರಣಗಳಲ್ಲಿ ಪ್ರತಿ ಇಲಾಖೆಗೆ 2-3 ಪೆನ್ ಡ್ರೈವ್ಗಳಿಗೆ ಅನುಮತಿ ನೀಡಬಹುದು. ಇದಕ್ಕಾಗಿ ಆಯಾ ಆಡಳಿತಾತ್ಮಕ ಮುಖ್ಯಸ್ಥರು ರಾಜ್ಯ ಮಾಹಿತಿ ವಿಜ್ಞಾನ ಅಧಿಕಾರಿ, ರಾಷ್ಟ್ರೀಯ ಮಾಹಿತಿ ವಿಜ್ಞಾನ ಕೇಂದ್ರಕ್ಕೆ ವಿಧ್ಯುಕ್ತವಾಗಿ ಮನವಿಯನ್ನು ಸಲ್ಲಿಸಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.
Next Story





