ಜಾರ್ಖಂಡ್ | ಕಳ್ಳತನದ ಶಂಕೆಯಲ್ಲಿ ಮಹಿಳೆಯನ್ನು ಥಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ

ಸಾಂದರ್ಭಿಕ ಚಿತ್ರ
ರಾಂಚಿ : ಜಾರ್ಖಂಡ್ನ ಗಿರಿದಿಹ್ ಜಿಲ್ಲೆಯಲ್ಲಿ ಆಭರಣ ಕಳ್ಳತನದ ಆರೋಪದಲ್ಲಿ ಮಹಿಳೆಯೋರ್ವಳನ್ನು ಥಳಿಸಿ, ಆಕೆಯ ಕೂದಲು ಕತ್ತರಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ರವಿವಾರ ಸಂಜೆ ದುಮ್ರಿ ಬ್ಲಾಕ್ನ ಪಿಪ್ರಾದಿಹ್ ಗ್ರಾಮದಲ್ಲಿ ಘಟನೆ ನಡೆದಿದೆ. ಆಭರಣ ಕಳ್ಳತನದ ಆರೋಪದ ಮೇಲೆ ನಾಗೇಶ್ವರ ಯಾದವ್ ಮತ್ತು ಆತನ ಕುಟುಂಬಸ್ಥರು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದುಮ್ರಿ ಪೊಲೀಸ್ ಠಾಣಾಧಿಕಾರಿ ಪ್ರಣೀತ್ ಪಟೇಲ್ ತಿಳಿಸಿದ್ದಾರೆ.
ಸೋಮವಾರ ಘಟನೆಯ ವಿಡಿಯೋ ವೈರಲ್ ಆಗಿದೆ. ಇದರ ಬಳಿಕ ಸಂತ್ರಸ್ತೆಯನ್ನು ಸಂಪರ್ಕಿಸಿದ್ದೇವೆ. ಹಲ್ಲೆಗೆ ಸಂಬಂಧಿಸಿ ಆರು ಮಹಿಳೆಯರು ಸೇರಿದಂತೆ ಎಂಟು ಜನರ ಮೇಲೆ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಗೊಳಗಾದ ಮಹಿಳೆಯನ್ನು ದುಮ್ರಿಯ ರೆಫರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





