ಕೇರಳ: ಫುಟ್ಬಾಲ್ ಪಂದ್ಯ ವೀಕ್ಷಕರ ಮೇಲೆ ಬಿದ್ದ ಪಟಾಕಿ; 50ಕ್ಕೂ ಅಧಿಕ ಮಂದಿಗೆ ಗಾಯ

PC : PTI
ಮಲಪ್ಪುರಂ: ಫುಟ್ಬಾಲ್ ಪಂದ್ಯ ವೀಕ್ಷಿಸುತ್ತಿದ್ದವರ ಮೇಲೆ ತಪ್ಪಾಗಿ ಸಿಡಿದ ಪಟಾಕಿಗಳು ಬಿದ್ದು 50ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಮಲಪ್ಪುರಂನಲ್ಲಿ ಮಂಗಳವಾರ ಸಂಭವಿಸಿದೆ.
ಇವರಲ್ಲಿ ಗಂಭೀರ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಯುನೈಟೆಡ್ ಎಫ್ಸಿ ನೆಲ್ಲಿಕೂತು ಹಾಗೂ ಕೆಎನ್ಜಿ ಮಾವೂರು ನಡುವಿನ ಸೆವೆನ್ಸ್ ಫುಟ್ಬಾಲ್ನ ಅಂತಿಮ ಪಂದ್ಯದ ವೇಳೆ ಸಿಡಿಸಿದ ಪಟಾಕಿ ಬಿದ್ದು ಈ ಅವಘಡ ಸಂಭವಿಸಿದೆ. ಈ ಅವಘಢದ ಸಂದರ್ಭ ಕ್ರೀಡಾಂಗಣದಲ್ಲಿ ಸಾವಿರಾರು ವೀಕ್ಷಕರು ಇದ್ದರು.
ಘಟನೆಗೆ ಸಂಬಂಧಿಸಿ ಪುಟ್ಬಾಲ್ ಪಂದ್ಯದ ಆಯೋಜಕರ ವಿರುದ್ಧ ಪೊಲೀಸರು ಬುಧವಾರ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗಾಯಗೊಂಡ ವ್ಯಕ್ತಿಗಳ ಚಿಕಿತ್ಸೆಯ ವೆಚ್ಚವನ್ನು ತಾವು ಭರಿಸುವುದಾಗಿ ಪುಟ್ಬಾಲ್ ಪಂದ್ಯದ ಆಯೋಜಕರು ತಿಳಿಸಿದ್ದಾರೆ.
Next Story





