ಭಿನ್ನಸಾಮರ್ಥ್ಯದ ಬಾಲಕಿಗೆ ಬುಡಕಟ್ಟು ಭಾಷೆಯಲ್ಲೇ ದೃಶ್ಯ, ಶ್ರಾವ್ಯ ಪಠ್ಯ ; ಕೇರಳ ಶಿಕ್ಷಣ ಇಲಾಖೆಯ ವಿಶಿಷ್ಟ ಸಾಧನೆ

ತಿರುವನಂತಪುರ: ಕೇರಳದ ಮಲಪ್ಪುರಂ ಜಿಲ್ಲೆಯ ಚೋಳನಾಯ್ಕನ್ ಬುಡಕಟ್ಟು ಪಂಗಡಕ್ಕೆ ಸೇರಿದ ಭಿನ್ನಸಾಮರ್ಥ್ಯದ ವಿದ್ಯಾರ್ಥಿನಿಗಾಗಿ ಆ ಪಂಗಡದ ವಿಶಿಷ್ಟ ಭಾಷೆಯಲ್ಲಿಯೇ 30 ನಿಮಿಷಗಳ ದೃಶ್ಯ ಹಾಗೂ ಶ್ರಾವ್ಯ ಪಠ್ಯಗಳನ್ನು ಸಿದ್ಧಪಡಿಸುವ ಮೂಲಕ ರಾಜ್ಯದ ಸಾಮಾನ್ಯ ಶಿಕ್ಷಣ ಇಲಾಖೆಯು ಅಪೂರ್ವ ಸಾಧನೆ ಮಾಡಿದೆ.
ನೀಲಂಬೂರಿನ 12 ವರ್ಷದ ಬಾಲಕಿ ಮೀನಾಕ್ಷಿ ‘ಸಮಗ್ರ ಶಿಕ್ಷಾ ಕೇರಳ’ ಕಾರ್ಯಕ್ರಮದಡಿ ಈ ಸೌಲಭ್ಯ ಪಡೆದಿರುವ ವಿದ್ಯಾರ್ಥಿನಿ, ಆಕೆಯ ತಂದೆ ಮಣಿ ಕಳೆದ ತಿಂಗಳು ದಟ್ಟಾರಣ್ಯದಲ್ಲಿ ಕಾಡಾನೆಯ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದರು.
ಚೋಳನಾಯ್ಕನ್ ಬುಡಕಟ್ಟು ಸಮುದಾಯದವರು ದಟ್ಟವಾದ ಅರಣ್ಯ ಪ್ರದೇಶದ ಒಳಗೆ ವಾಸಿಸುತ್ತಿದ್ದು,ಸಮಾಜದ ಮುಖ್ಯವಾಹಿನಿಯ ಜೊತೆ ಅವರ ಸಂಪರ್ಕ ಇವತ್ತಿಗೂ ಅತ್ಯಂತ ಸೀಮಿತವಾಗಿದೆ.
ಮೀನಾಕ್ಷಿಯ ತಂದೆಯ ಸಾವಿನ ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಆಕೆಯ ಕುಟುಂಬಿಕರನ್ನು ಕಾಡುಪ್ರದೇಶದಿಂದ ಸರಕಾರಿ ವಸತಿಗೃಹಕ್ಕೆ ಸ್ಥಳಾಂತರಿಸಿದ್ದರು.
ಸಮಗ್ರ ಶಿಕ್ಷಾ ಕೇರಳವು ಕೇರಳ ರಾಜ್ಯಾದ್ಯಂತ 6168 ವಿದ್ಯಾರ್ಥಿಗಳಿಗೆ ಮನೆಯಲ್ಲೇ ಶಿಕ್ಷಣವನ್ನು ನೀಡುತ್ತಿದೆ. ವಿದ್ಯಾರ್ಥಿಗಳಿಗೆ ವೀಡಿಯೊ ತರಗತಿಗಳನ್ನು ನಡೆಸುವುದರ ಜೊತೆಗೆ ಅವರ ಮನೆಗಳಿಗೂ ಶಿಕ್ಷಕರು ಭೇಚಿ ನೀಡಿ, ಪಠ್ಯಗಳನ್ನು ಬೋಧಿಸುತ್ತಾರೆ.
ಮೀನಾಕ್ಷಿ ಅಲ್ಪ ಅವಧಿಯಲ್ಲಿಯೇ ಪಠ್ಯಗಳಿಗೆ ಚೆನ್ನಾಗಿ ಪ್ರತಿಕ್ರಿಯಿಸುತ್ತಿದ್ದಾಳೆಂದು ರಾಜ್ಯ ಕಾರ್ಯಕ್ರಮ ಅಧಿಕಾರಿ ಸಿಂಧು ಎಸ್.ಎಸ್.ತಿಳಿಸಿದ್ದಾರೆ ಮೀನಾಕ್ಷಿಯ ದೈಹಿಕ ಪರಿಸ್ಥಿತಿಯಿಂದಾಏಗಿ ಆಕೆಗೆ ಮನೆಯಿಂದ ಹೊರಹೋಗಲು ಸಾಧ್ಯವಾಗುತ್ತಿಲ್ಲವೆಂದು ಆಕೆ ಹೇಳಿದ್ದಾರೆ.
ಚೋಳನಾಯ್ಕನ್ ಪಂಗಡದವ ಮಲಯಾಳಂ ಹಾಗೂ ಕನ್ನಡದ ಜೊತೆ ಸಾಮ್ಯತೆಯನ್ನು ಹೊಂದಿರುವಂತಹ ದ್ರಾವಿಡ ಮೂಲದ ಭಾಷೆಯೊಂದನ್ನು ಆಡುತ್ತಾರೆ.ಅವರ ಭಾಷೆಯಲ್ಲೇ ಆಡುತ್ತಾರೆ. ಹೀಗಾಗಿ ಮೀನಾಕ್ಷಿಗೆ ಆಕೆಯ ಭಾಷೆಯಲ್ಲಿಯೇ ಪಠ್ಯಗಳನ್ನು ಸಿದ್ಧಪಡಿಸಲಾಗಿದೆ.
ಮೀನಾಕ್ಷಿಗಾಗಿ ಚೋಳನಾಯ್ಕನ್ ಭಾಷೆಯಲ್ಲಿ ಸಿದ್ಧಪಡಿಸಲಾದ ಪಠ್ಯಗಳಿಗೆ ‘ಥಂಕ, ಬಾನ, ಬೆಳ್ಳಿ ’’ ( ಚಂದ್ರ,ಆಗಸ ಮತ್ತು ನಕ್ಷತ್ರ) ಎಂದು ಹೆಸರಿಡಲಾಗಿದೆ. ‘‘ಶಿಕ್ಷಣದಲ್ಲಿ ಎಲ್ಲರ ಒಳಪಡಿಸುವಿಕೆ.ಯ ಕೇರಳದ ಮಾದರಿ ಇದಾಗಿದೆ’’ ಎಂದು ರಾಜ್ಯದ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಅವರು ರಾಜ್ಯದ ಸಮಗ್ರ ಶಿಕ್ಷಾ ಯೋಜನೆಯನ್ನು ಪ್ರಶಂಸಿಸಿದ್ದಾರೆ.
‘‘ ಸಮಗ್ರ ಶಿಕ್ಷಾ ಯೋಜನೆಯು ವಿಶೇಷ ಸಾಮಥ್ಯದ ಬಾಲಕಿಗೆ ಮಲಯಾಳಂ ಭಾಷೆ ತಿಳಿಯುವುದಿಲ್ಲವಾದ್ದರಿಂದ, ಆಕೆಯ ಮಾತೃಭಾಷೆಯಲ್ಲಿಯೇ 30 ದೃಶ್ಯ ಶ್ರಾವ್ಯ ಪಠ್ಯಗಳನ್ನು ಸಿದ್ಧಪಡಿಸಲಾಗಿದೆ ಎಂದು ಸಚಿವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.







