ಕೇರಳ ಬಿಜೆಪಿ ಮುಖವಾಣಿ Janmabhumi ಯಲ್ಲಿ ಮುಸ್ಲಿಂ ಲೀಗ್ನ ʼಚಂದ್ರಿಕಾʼ ಪತ್ರಿಕೆಯ ಸಂಪಾದಕೀಯ ಪುಟ ಪ್ರಕಟ!

Photo| thehindu
ತಿರುವನಂತಪುರಂ: ಕೇರಳ ಬಿಜೆಪಿ ಮುಖವಾಣಿ ಜನ್ಮಭೂಮಿ(Janmabhumi) ಹೊಸ ವರ್ಷದ ದಿನವೇ ದೊಡ್ಡ ಲೋಪವೊಂದನ್ನು ಮಾಡಿದೆ. ಜನ್ಮಭೂಮಿಯ ಸಂಪಾದಕೀಯ ಪುಟದಲ್ಲಿ ತಪ್ಪಾಗಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ಚಂದ್ರಿಕಾ(Chandrika) ಪತ್ರಿಕೆಯ ಪುಟ ಪ್ರಕಟವಾಗಿದೆ.
ಹೊಸ ವರ್ಷದ ದಿನದ ಬೆಳಿಗ್ಗೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(IUML) ರಾಜ್ಯಾಧ್ಯಕ್ಷರಾಗಿರುವ ಸಯ್ಯದ್ ಸಾದಿಕಲಿ ಶಿಹಾಬ್ ತಂಙಳ್ ಅವರಿಗೆ ಕಣ್ಣೂರಿನ ಪಕ್ಷದ ಕಾರ್ಯಕರ್ತರೋರ್ವರು ಕರೆ ಮಾಡಿ ಜನ್ಮಭೂಮಿಯಲ್ಲಿ ಲೇಖನ ಪ್ರಕಟವಾಗಿರುವ ಬಗ್ಗೆ ತಿಳಿಸಿದ್ದರು. ತಂಙಳ್ ಆರಂಭದಲ್ಲಿ ಇದು ತಮಾಷೆಯಾಗಿರಬಹುದು ಎಂದುಕೊಂಡಿದ್ದರೂ, ಇದು ನಿಜ ಎನ್ನುವುದು ಬಳಿಕ ಅವರ ಅರಿವಿಗೆ ಬಂದಿತ್ತು.
ಕಣ್ಣೂರು ಮತ್ತು ಕಾಸರಗೋಡಿನ ಜನ್ಮಭೂಮಿ ಓದುಗರಿಗೆ ಹೊಸ ವರ್ಷದ ದಿನವೇ ಇದು ಅಚ್ಚರಿ ಮೂಡಿಸಿತ್ತು. ಆದರೆ ಪತ್ರಕರ್ತರಿಗೆ ಇದು ದೀರ್ಘಕಾಲ ನೆನಪಿನಲ್ಲಿ ಉಳಿಯುವ ಒಂದು ಲೋಪವಾಗಿತ್ತು.
ಈ ಬೆಳವಣಿಗೆ ಬೆನ್ನಲ್ಲೆ ಪ್ರತಿಕ್ರಿಯಿಸಿದ Janmabhumi ಕಣ್ಣೂರು ಬ್ಯೂರೋ ಮುಖ್ಯಸ್ಥ ಗಣೇಶ್ ಮೋಹನ್, ಮುದ್ರಣ ಪ್ರಕ್ರಿಯೆ ವೇಳೆ ಗೊಂದಲ ಉಂಟಾಗಿರುವುದರಿಂದ ಈ ಲೋಪ ಸಂಭವಿಸಿದೆ ಎಂದು ಹೇಳಿದ್ದಾರೆ.
ಖಾಸಗಿ ಸಿಟಿಪಿ ಕೇಂದ್ರದಲ್ಲಿ ಈ ಗೊಂದಲ ಸಂಭವಿಸಿದೆ. ಅಲ್ಲಿ ಡಿಜಿಟಲ್ ವೃತ್ತಪತ್ರಿಕೆ ಪುಟ ಫೈಲ್ಗಳನ್ನು ಫಿಲ್ಮ್ ಬಳಸದೆ ನೇರವಾಗಿ ಮುದ್ರಣ ಫಲಕಗಳಿಗೆ ವರ್ಗಾಯಿಸಲಾಗುತ್ತದೆ. ಜನ್ಮಭೂಮಿ ಮತ್ತು ಚಂದ್ರಿಕಾ ಪತ್ರಿಕೆಗಳಿಗೆ ಪ್ಲೇಟ್(plate)ಗಳನ್ನು ಸಿದ್ಧಪಡಿಸುವ ಕಣ್ಣೂರು ಸಿಟಿಪಿ ಕೇಂದ್ರದಲ್ಲಿ, ಚಂದ್ರಿಕಾದ ಸಂಪಾದಕೀಯ ಪುಟದ plate ಅನ್ನು ಜನ್ಮಭೂಮಿ plate ಳೊಂದಿಗೆ ತಪ್ಪಾಗಿ ಕಳುಹಿಸಿಕೊಡಲಾಗಿತ್ತು.
“ಮಾಧ್ಯಮ, ಸುಪ್ರಭಾತ ಮತ್ತು ಜನ್ಮಭೂಮಿಯಂತಹ ಪತ್ರಿಕೆಗಳನ್ನು ಮುದ್ರಿಸುವ ಪ್ರತೀಕ್ಷಾ ಪ್ರಿಂಟರ್ಸ್ನಲ್ಲಿ ಈ ಪ್ರಮಾದ ಗಮನಕ್ಕೆ ಬಂದಿಲ್ಲ. ಅದೃಷ್ಟವಶಾತ್, ಆ ದಿನ ಚಂದ್ರಿಕಾ ಸಂಪಾದಕೀಯ ಪುಟದಲ್ಲಿ ಬಿಜೆಪಿಯನ್ನು ನೇರವಾಗಿ ಗುರಿಯಾಗಿಸಿಕೊಂಡು ಏನೂ ಇರಲಿಲ್ಲ” ಎಂದು ಕಾಸರಗೋಡಿನ ಬಿಜೆಪಿ ಕಾರ್ಯಕರ್ತರೊಬ್ಬರು ತಮ್ಮನ್ನು ತಾವು ಸಮಾಧಾನಪಡಿಸಿಕೊಳ್ಳುತ್ತಾ ಹೇಳಿದರು.
ಜನ್ಮ ಭೂಮಿಯ ಪುಟ 4ರಲ್ಲಿ ಚಂದ್ರಿಕಾ ಪತ್ರಿಕೆಯ masthead ಹಾಗೂ ಇಂಪ್ರಿಂಟ್ ಲೈನ್ ಜೊತೆಗೆ ಎಡ ಪ್ರಜಾಸತ್ತಾತ್ಮಕ ರಂಗದ ಹಿನ್ನೆಡೆ ಕುರಿತಾದ ಸಂಪಾದಕೀಯ ಮತ್ತು ಸಾದಿಕಲಿ ಶಿಹಾಬ್ ತಂಙಳ್, ಎಂ.ಕೆ. ಮುನೀರ್ ಮತ್ತು ಮುಹಮ್ಮದ್ ಶಾ ಅವರ ಮೂರು ಅಭಿಪ್ರಾಯ ಲೇಖನಗಳು ಪ್ರಕಟವಾಗಿದ್ದವು. ಅವು ಕ್ರಮವಾಗಿ 2025ಕ್ಕೆ ವಿದಾಯ ಹೇಳುವ ಬಗ್ಗೆ ಕೇಂದ್ರೀಕರಿಸಿತ್ತು. ಬಂಕಿಮ್ ಚಂದ್ರ ಚಟರ್ಜಿ ಅವರ ಕೃತಿಗಳ ಕುರಿತು ಚಿಂತನೆ ಹಾಗೂ ಯಲಹಂಕ ಘಟನೆಗೆ ಸಂಬಂಧಿಸಿದ ವಾಸ್ತವಾಂಶಗಳ ಬಗ್ಗೆಯೂ ಕೇಂದ್ರೀಕೃತವಾಗಿದ್ದವು.
ಈ ಕುರಿತು ಪ್ರತಿಕ್ರಿಯಿಸಿದ ಸಯ್ಯದ್ ಸಾದಿಕಲಿ ಶಿಹಾಬ್ ತಂಙಳ್, ಹೆಚ್ಚು ಓದುಗರಿಗೆ ತಲುಪುದಕ್ಕಿಂತ ಬೇರೆ ವರ್ಗದ ಓದುಗರೊಂದಿಗೆ ಸಂಪರ್ಕ ಸಾಧಿಸಿರುವುದು ನನಗೆ ಸಂತೋಷವಾಗಿದೆ. ಇದು ನಿಜವಾಗಿಯೂ ಹೊಸ ವರ್ಷದ ಅಚ್ಚರಿ. ಮುಂದಿನ ವರ್ಷವೂ ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದರು.
ಚಂದ್ರಿಕಾ ಸಂಪಾದಕ ಕಮಲ್ ವರದೂರು ಅವರ ದೃಷ್ಟಿಯಲ್ಲಿ, ಇದು ಪ್ರತಿಸ್ಪರ್ಧಿ ಪತ್ರಿಕೆಯಿಂದ ಬಂದ ಅನಿರೀಕ್ಷಿತ ಪ್ರಚಾರವಾಗಿತ್ತು. ಹೊಸ ವರ್ಷದ ದಿನ ನಮ್ಮ ಸಂಪಾದಕೀಯ ಪುಟ ಹೆಚ್ಚಿನ ಓದುಗರನ್ನು ತಲುಪಿದ್ದು ಶುಭದ ಸಂಕೇತ. ಮುಂದಿನ ದಿನಗಳು ಶುಭವಾಗಲಿದೆ ಎಂದು ಅವರು ನಗುತ್ತಾ ಹೇಳಿದರು.
ಮಾಧ್ಯಮಗಳಲ್ಲಿ, ವಿಶೇಷವಾಗಿ ಪತ್ರಿಕೆಗಳಲ್ಲಿ, ತಪ್ಪುಗಳು ಮತ್ತು ಗೊಂದಲಗಳು ಅಪರೂಪವಲ್ಲ. ಆದರೆ ಒಂದು ಪಕ್ಷದ ಮುಖವಾಣಿ ಮತ್ತೊಂದು ಪಕ್ಷದ ಪತ್ರಿಕೆಯ ಸಂಪಾದಕೀಯ ಪುಟವನ್ನೇ ಪ್ರಕಟಿಸಿರುವುದು ಪತ್ರಿಕೋದ್ಯಮ ವಲಯದಲ್ಲಿ ಅಪರೂಪದ ಯಡವಟ್ಟಾಗಿದೆ.







