ಬಿಹಾರದ 128 ಕ್ಷೇತ್ರಗಳಲ್ಲಿ ಎನ್ಡಿಎ ಗೆಲುವಿಗೆ ಎಸ್ಐಆರ್ ಸಹಕರಿಸಿದೆ : ಕೇರಳ ಕಾಂಗ್ರೆಸ್ ಆರೋಪ

Photo credit: PTI
ಕೋಝಿಕ್ಕೋಡ್ : ಚುನಾವಣಾ ಆಯೋಗ ಎಸ್ಐಆರ್ ಪ್ರಕ್ರಿಯೆ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಡಿಲಿಟ್ ಮಾಡಿರುವುದು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಗೆಲುವಿಗೆ ಸಹಕರಿಸಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.
ಎನ್ಡಿಎ ಗೆದ್ದ 202 ಸ್ಥಾನಗಳಲ್ಲಿ 128 ಸ್ಥಾನಗಳಲ್ಲಿ ಅಳಿಸಿದ ಮತದಾರರು ಮತ್ತು ಗೆಲುವಿನ ಅಂತರದ ನಡುವೆ ನೇರ ಸಂಬಂಧವನ್ನು ತೋರಿಸುತ್ತವೆ ಎಂದು ಪಕ್ಷವು ಬಿಡುಗಡೆಗೊಳಿಸಿದ ವಿವರವಾದ ವಿಶ್ಲೇಷಣೆಯಲ್ಲಿ ತಿಳಿಸಿದೆ. ಎಸ್ಐಆರ್ ಬಡ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮೇಲೆ ಅಸಮಾನವಾಗಿ ಪರಿಣಾಮ ಬೀರಿದೆ ಎಂದು ಕಾಂಗ್ರೆಸ್ ಹೇಳಿದೆ.
ಈ ಮಾದರಿಯು ಎಸ್ ಐಆರ್ ಸೋಗಿನಲ್ಲಿ ಉದ್ದೇಶಪೂರ್ವಕವಾಗಿ ಮತದಾರರ ಹೆಸರನ್ನು ಡಿಲಿಟ್ ಮಾಡುವ ಕೆಲಸ ಎಂದು ಕಾಂಗ್ರೆಸ್ ಹೇಳಿದೆ. ಸುಪ್ರೀಂ ಕೋರ್ಟ್ ನಿರ್ದೇಶನಗಳ ಬಳಿಕ ಭಾರತೀಯ ಚುನಾವಣಾ ಆಯೋಗ ಇತ್ತೀಚೆಗೆ ಬಹಿರಂಗಪಡಿಸಿದ ಡಿಲಿಟ್ ಮಾಡಿರುವ ಮತದಾರರ ಅಂಕಿ ಅಂಶವನ್ನು ಪರಿಶೀಲಿಸಿದ ನಂತರ ಪಕ್ಷವು ಈ ತೀರ್ಮಾನಕ್ಕೆ ಬಂದಿದೆ ಎಂದು ಹೇಳಿದೆ.
ಬಿಡುಗಡೆಯಾದ ದತ್ತಾಂಶ ಸಂಗ್ರಹದಲ್ಲಿ ಒಬ್ಬನೇ ಒಬ್ಬ ಅಕ್ರಮ ವಲಸಿಗನೂ ಇಲ್ಲ ಎಂದು ಹೇಳಿರುವುದರಿಂದ ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ನೇಪಾಳದ ಅಕ್ರಮ ವಲಸಿಗರನ್ನು ಗುರುತಿಸುವ ಎಸ್ಐಆರ್ ಉದ್ದೇಶ ವಿಫಲವಾಯಿತು. NDA ವಿರುದ್ಧ ಮತ ಚಲಾಯಿಸುವ ಸಾಧ್ಯತೆಯಿರುವ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಎಸ್ಐಆರ್ ಪ್ರಕ್ರಿಯೆ ಬಳಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
BIHAR RIGGING | 128 seats out of the 202 won by the NDA came purely from SIR-based voter deletions.
— Congress Kerala (@INCKerala) November 15, 2025
We analysed the voter deletion data published by the ECI as ordered by the Supreme Court and compared it with the victory margins in each constituency. The pattern is… pic.twitter.com/HiLjWjkWyZ







