ಕೊಚ್ಚಿ-ದಿಲ್ಲಿ ಇಂಡಿಗೊ ವಿಮಾನಕ್ಕೆ ಬಾಂಬ್ ಬೆದರಿಕೆ; ತುರ್ತು ಭೂ ಸ್ಪರ್ಷ

PC : PTI
ಕೊಚ್ಚಿ: ಮಸ್ಕತ್ನಿಂದ ಇಲ್ಲಿಗೆ ಆಗಮಿಸಿದ ಹಾಗೂ ದಿಲ್ಲಿಗೆ ತೆರಳಿದ್ದ ಇಂಡಿಗೊ ವಿಮಾನಕ್ಕೆ ಮಂಗಳವಾರ ಬಾಂಬ್ ಬೆದರಿಕೆ ಒಡ್ಡಲಾಗಿದೆ ಎಂದು ಕೊಚ್ಚಿನ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಸಿಐಎಲ್) ತಿಳಿಸಿದೆ.
ಈ ಹಿನ್ನೆಲೆಯಲ್ಲಿ ವಿಮಾನವನ್ನು ತಪಾಸಣೆಗೆ ಒಳಪಡಿಸಲು ನಾಗಪುರ ವಿಮಾನ ನಿಲ್ದಾಣದಲ್ಲಿ ತುರ್ತ ಭೂಸ್ಪರ್ಶ ಮಾಡಲಾಯಿತು ಎಂದು ಅದು ಹೇಳಿದೆ.
ಇಂಡಿಗೊ ವಿಮಾನ ಯಾನ ಸಂಸ್ಥೆಯ ಅಧಿಕೃತ ಈಮೇಲ್ ಐಡಿಗೆ ಈ ಬೆದರಿಕೆ ಸಂದೇಶ ಬಂದಿದೆ. ಬೆಳಗ್ಗೆ 9.31ಕ್ಕೆ ದಿಲ್ಲಿಗೆ ತೆರಳಿದ್ದ ಈ ವಿಮಾನದಲ್ಲಿ 157 ಪ್ರಯಾಣಿಕರು ಹಾಗೂ 6 ಮಂದಿ ಸಿಬ್ಬಂದಿ ಇದ್ದರು.
ಬಳಿಕ ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿ (ಬಿಟಿಎಸಿ) ಸಭೆ ಸೇರಿತು ಹಾಗೂ ಬಾಂಬ್ ಬೆದರಿಕೆ ನಿಖರವಾಗಿದೆ ಎಂದು ಘೋಷಿಸಿತು ಎಂದು ಸಿಐಎಎಲ್ ಹೇಳಿದೆ.
‘‘ಈ ಮಾಹಿತಿಯನ್ನು ಸಂಬಂಧಿತ ಅಧಿಕಾರಿಗಳಿಗೆ ರವಾನಿಸಲಾಯಿತು. ಈ ಹಿನ್ನೆಲೆಯಲ್ಲಿ ವಿಮಾನವನ್ನು ನಾಗಪುರ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು’’ ಎಂದು ಸಿಐಎಎಲ್ ತಿಳಿಸಿದೆ.
Next Story





