ಕೋಲ್ಕತಾ| ಗೋದಾಮಿನಲ್ಲಿ ಅಗ್ನಿ ಅವಘಡ: ಮೃತರ ಸಂಖ್ಯೆ 21ಕ್ಕೆ ಏರಿಕೆ

Photo Credit : PTI
ಕೋಲ್ಕತಾ, ಜ. 29: ಜನವರಿ 26ರಂದು ಅಗ್ನಿ ಅವಘಡ ಸಂಭವಿಸಿದ ಕೋಲ್ಕತಾದ ಆನಂದಪುರದ ಗೋದಾಮು ಹಾಗೂ ಉತ್ಪಾದನಾ ಘಟಕದಲ್ಲಿ ಮತ್ತೆ 13 ಮೃತದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಈ ದುರಂತದಲ್ಲಿ ಮೃತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
28 ಮಂದಿ ನಾಪತ್ತೆಯಾಗಿದ್ದು, ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
ದಕ್ಷಿಣ 21 ಪರಗಣ ಜಿಲ್ಲೆಯ ಆನಂದಪುರದಲ್ಲಿರುವ ಎರಡು ಗೋದಾಮುಗಳು ಹಾಗೂ ಮೋಮೋ ಕಂಪೆನಿಯ ಒಂದು ಉತ್ಪಾದನಾ ಘಟಕ ರವಿವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಟ್ಟು ಬೂದಿಯಾಗಿತ್ತು.
ಘಟನೆಯ ಸ್ವರೂಪ ಹಾಗೂ ಹಾನಿಯ ವ್ಯಾಪ್ತಿಯನ್ನು ಗಮನಿಸಿದರೆ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪತ್ತೆಯಾದ ಒಟ್ಟು 21 ಮೃತದೇಹಗಳ ಗುರುತು ಪತ್ತೆ ಹಚ್ಚಲು ಡಿಎನ್ಎ ವಿಶ್ಲೇಷಣೆ ಕಾರ್ಯ ಗುರುವಾರ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story





