"ಸುಳ್ಳು ಸುದ್ದಿ ಹರಡಬೇಡಿ": ಪತ್ರಕರ್ತೆ ಬರ್ಖಾ ದತ್ ಗೆ ಕೊಲ್ಕತ್ತಾ ಪೊಲೀಸರ ಎಚ್ಚರಿಕೆ

ಬರ್ಖಾ ದತ್ (Photo credit: scroll.in)
ಹೊಸದಿಲ್ಲಿ: ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಂತರ ಸುದ್ದಿಯಲ್ಲಿರುವ ಕೊಲ್ಕತ್ತಾದ ಆರ್ ಜೆ ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಎಮರ್ಜೆನ್ಸಿ ಕೊಠಡಿಯಲ್ಲಿ ಗೂಂಡಾಗಳು ದಾಂಧಲೆಗೈದು ಹಾನಿಯೆಸಗಿದ್ದಾರೆ ಎಂಬ ಮಾಹಿತಿಯೊಂದಿಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಪತ್ರಕರ್ತೆ ಬರ್ಖಾ ದತ್ ಅವರಿಗೆ ಸುಳ್ಳು ಸುದ್ದಿ ಹರಡದಂತೆ ಕೊಲ್ಕತ್ತಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
“ಅಪರಾಧ ನಡೆದ ಸ್ಥಳ ಸೆಮಿನಾರ್ ರೂಮ್ ಆಗಿದೆ ಹಾಗೂ ಅದು ಸುಸ್ಥಿತಿಯಲ್ಲಿದೆ, ಯಾರೂ ಅದನ್ನು ಮುಟ್ಟಿಲ್ಲ. ಸುಳ್ಳು ಸುದ್ದಿ ಹರಡಬೇಡಿ. ನಾವು ಕಾನೂನು ಕ್ರಮಕೈಗೊಳ್ಳುತ್ತೇವೆ,” ಎಂದು ಕೊಲ್ಕತ್ತಾ ಪೊಲೀಸರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಕೊಲ್ಕತ್ತಾದಲ್ಲಿ ಈ ಸಮಯ ನಡೆಯುತ್ತಿರುವ ವಿಷಯ ನಿಜವಾಗಿಯೂ ಖೇದಕರ. ಅತ್ಯಾಚಾರ ಮತ್ತು ಕೊಲೆ ನಡೆದ ಆರ್ ಜಿ ಕರ್ ಆಸ್ಪತ್ರೆಯ ಎಮರ್ಜೆನ್ಸಿ ಕೊಠಡಿಯನ್ನು ಹಿಂಸಾತ್ಮಕ ಗುಂಪೊದು ದಾಂಧಲೆಗೈದಿದೆ. ಪೊಲೀಸರು ನಮಗೆ ಸಹಾಯ ಮಾಡಿಲ್ಲ ಎಂದು ನಾನು ಮಾತನಾಡಿದ ಹಲವು ವೈದ್ಯರು ಹೇಳಿದ್ದಾರೆ,” ಎಂದು ಬರ್ಖಾ ಪೋಸ್ಟ್ ಮಾಡಿದ್ದರು.
Crime of Scene is Seminar Room which is intact and has not been touched. Don’t spread fake news. We will take legal action. https://t.co/A7PDWYAO4E
— Kolkata Police (@KolkataPolice) August 15, 2024