ಲಡಾಖ್ ಹಿಂಸಾಚಾರ: ನ್ಯಾಯಾಂಗ ವಿಚಾರಣೆಗೆ ಗೃಹ ಸಚಿವಾಲಯದಿಂದ ಆದೇಶ

Photo Credit : ANI
ಹೊಸದಿಲ್ಲಿ,ಅ.17: ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು (ಎಂಎಚ್ಎ) ಲಡಾಖ್ ನಲ್ಲಿ ಸೆ.24ರಂದು ನಾಲ್ವರ ಸಾವಿಗೆ ಕಾರಣವಾಗಿದ್ದ ಹಿಂಸಾಚಾರದ ಕುರಿತು ನ್ಯಾಯಾಂಗ ವಿಚಾರಣೆಗೆ ಶುಕ್ರವಾರ ಆದೇಶಿಸಿದೆ.
ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಬಿ.ಎಸ್.ಚೌಹಾಣ್ ಅವರು ವಿಚಾರಣೆಯನ್ನು ನಡೆಸಲಿದ್ದಾರೆ.
ಲಡಾಖ್ ಗೆ ರಾಜ್ಯ ಸ್ಥಾನಮಾನ ಮತ್ತು ಸ್ವಾಯತ್ತೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗೋಲಿಬಾರ್ ಸಂದರ್ಭದಲ್ಲಿ ಮೃತಪಟ್ಟವರು, ಗಾಯಾಳುಗಳು ಮತ್ತು ಬಂಧಿತರೊಂದಿಗೆ ಒಗ್ಗಟ್ಟಿನ ಸಂಕೇತವಾಗಿ ಅ.18ರಂದು ಹಮ್ಮಿಕೊಳ್ಳಲಾಗಿರುವ ಪ್ರತಿಭಟನಾ ಜಾಥಾಕ್ಕೆ ಒಂದು ದಿನ ಮೊದಲು ಈ ಬೆಳವಣಿಗೆ ನಡೆದಿದೆ. ಬಂಧಿತರಲ್ಲಿ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಸೇರಿದ್ದಾರೆ.
Next Story





