‘ಉದ್ಯೋಗಕ್ಕೆ ಭೂಮಿ’ ಹಗರಣ | ಲಾಲು ಪ್ರಸಾದ್, ತೇಜ್ ಪ್ರತಾಪ್, ಹೇಮಾ ಯಾದವ್ಗೆ ಸಮನ್ಸ್

Photo Credit | indiatoday
ಚೆನ್ನೈ: ‘ಉದ್ಯೋಗಕ್ಕೆ ಭೂಮಿ’ ಹಗರಣಕ್ಕೆ ಸಂಬಂಧಿಸಿ ಕೇಂದ್ರದ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರಿಗೆ ದಿಲ್ಲಿ ನ್ಯಾಯಾಲಯ ಮಂಗಳವಾರ ಸಮನ್ಸ್ ಜಾರಿ ಮಾಡಿದೆ.
ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ಲಾಲು ಪ್ರಸಾದ್ ಯಾದವ್ ಅವರ ಪುತ್ರ ಹಾಗೂ ಬಿಹಾರದ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ಹಾಗೂ ಪುತ್ರಿ ಹೇಮಾ ಯಾದವ್ ಅವರಿಗೆ ಕೂಡ ಸಮನ್ಸ್ ಜಾರಿ ಮಾಡಿದ್ದಾರೆ.
ನ್ಯಾಯಾಧೀಶರು ಲಾಲು ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ಹಾಗೂ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಹೊಸ ಸಮನ್ಸ್ ಅನ್ನು ಜಾರಿಗೊಳಿಸಿದ್ದಾರೆ.
ಮಾರ್ಚ್ 11ರಂದು ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳಿಗೆ ಅವರು ನಿರ್ದೇಶಿಸಿದ್ದಾರೆ.
Next Story





