ಕೇರಳ ಕಡೆಗಣನೆ : ಗುರುವಾರ ದಿಲ್ಲಿಯಲ್ಲಿ ಕೇಂದ್ರದ ವಿರುದ್ಧ ಎಲ್ಡಿಎಫ್ ಪ್ರತಿಭಟನೆ

ಪಿಣರಾಯಿ ವಿಜಯನ್ | Photo: PTI
ಹೊಸದಿಲ್ಲಿ: ಕೇರಳದ ಹಣಕಾಸು ವಿಷಯಗಳ ಕುರಿತಂತೆ ಕೇಂದ್ರ ಸರಕಾರದ ನಿರ್ಲಕ್ಷ್ಯ ಆರೋಪಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳದ ಆಡಳಿತಾರೂಢ ಎಡರಂಗ ಹೊಸದಿಲ್ಲಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಲಿದೆ.
ಪ್ರತಿಭಟನೆಗೆ ಕೈಜೋಡಿಸುವಂತೆ ಎಲ್ಡಿಎಫ್ ಈಗಾಗಲೇ ಕಾಂಗ್ರೆಸ್ ನೇತೃತ್ವದ ಯುಡಿಎಫ್ಗೆ ಆಹ್ವಾನ ನೀಡಿದೆ. ಆದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅದನ್ನು ತಿರಸ್ಕರಿಸಿದೆ. ಆದರೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಗುರುವಾರ ಪೂರ್ವಾಹ್ನ 11 ಗಂಟೆಗೆ ಆರಂಭವಾಗಲಿರುವ ಪ್ರತಿಭಟನೆಯಲ್ಲಿ ಕೇರಳದ ಎಡರಂಗದ ಸಚಿವರು, ಶಾಸಕರು, ಸಂಸದರು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.
Next Story





