ಮಮ್ದಾನಿಯಿಂದ ಉಮರ್ ಖಾಲಿದ್ ಗೆ ಪತ್ರ | ಆಂತರಿಕ ವ್ಯವಹಾರಗಳಲ್ಲಿ ಬಾಹ್ಯ ಹಸ್ತಕ್ಷೇಪವನ್ನು ಭಾರತ ಸಹಿಸದು: ಬಿಜೆಪಿ

ರೆಹ್ರಾನ್ ಮಮ್ದಾನಿ | Photo Credit : AP \ PTI
ಹೊಸದಿಲ್ಲಿ, ಜ. 2: ಜೈಲಿನಲ್ಲಿರುವ ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಗೆ ಪತ್ರ ಬರೆಯುವ ಮೂಲಕ ನ್ಯೂಯಾರ್ಕ್ ನಗರದ ಮೇಯರ್ ರೆಹ್ರಾನ್ ಮಮ್ದಾನಿ ಅವರು ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಬಿಜೆಪಿ ಶುಕ್ರವಾರ ಆರೋಪಿಸಿದೆ. ಅಂತಹ ಯಾವುದೇ ಪ್ರಯತ್ನವನ್ನು ಭಾರತ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ಭಾರತದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಿರುವ ಮಮ್ದಾನಿಯ ನಿಲುವನ್ನು ಪ್ರಶ್ನಿಸಿದ ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಇಂತಹ ಪ್ರಯತ್ನಗಳನ್ನು ನಡೆಸುವುದರ ವಿರುದ್ಧ ನ್ಯೂಯಾರ್ಕ್ ನಗರದ ಮೇಯರ್ರಿಗೆ ಎಚ್ಚರಿಕೆ ನೀಡಿದ್ದಾರೆ.
‘‘ಒಂದು ವೇಳೆ ಭಾರತದ ಸಾರ್ವಭೌಮತೆಗೆ ಸವಾಲು ಬಂದರೆ, ಎಲ್ಲಾ 140 ಕೋಟಿ ಭಾರತೀಯರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಡಿಯಲ್ಲಿ ಒಗ್ಗೂಡಲಿದ್ದಾರೆ’’ ಎಂದು ಅವರು ಹೇಳಿದ್ದಾರೆ.
ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಭಾರತದ ಜನತೆಗೆ ಸಂಪೂರ್ಣ ನಂಬಿಕೆ ಇದೆ ಎಂದು ಭಾಟಿಯಾ ತಿಳಿಸಿದ್ದಾರೆ.
Next Story





