ಭಾರತೀಯ ವಿಜ್ಞಾನ ಸಂಸ್ಥೆಯ ಆಡಳಿತ ಮಂಡಳಿಗೆ ಇಬ್ಬರು ಸದನ ಸದಸ್ಯರ ಆಯ್ಕೆ ನಿರ್ಣಯಕ್ಕೆ ಲೋಕಸಭೆ ಅಂಗೀಕಾರ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ | Credit : Sansad TV via PTI
ಹೊಸದಿಲ್ಲಿ,ಡಿ.1: ಲೋಕಸಭೆಯು ಸೋಮವಾರ ಸರಕಾರವು ಮಂಡಿಸಿದ ನಿರ್ಣಯವನ್ನು ಅಂಗೀಕರಿಸುವ ಮೂಲಕ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್ಸಿ) ಆಡಳಿತ ಮಂಡಳಿಗೆ ಸದನದ ಇಬ್ಬರು ಸದಸ್ಯರ ಆಯ್ಕೆಗೆ ಮಾರ್ಗವನ್ನು ಸುಗಮಗೊಳಿಸಿತು.
ವಿಜ್ಞಾನ ಶಿಕ್ಷಣವನ್ನು ನೀಡುವ ಪ್ರಮುಖ ಸಂಸ್ಥೆಯಾಗಿರುವ ಐಐಎಸ್ಸಿಯ ಆಡಳಿತ ಮಂಡಳಿಗೆ ಲೋಕಸಭೆಯ ಇಬ್ಬರು ಸದಸ್ಯರನ್ನು ಆಯ್ಕೆ ಮಾಡುವ ನಿರ್ಣಯವನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ಮಂಡಿಸಿದರು.
ಎಸ್ಐಆರ್ ವಿರುದ್ಧ ಪ್ರತಿಭಟನೆಯ ನಡುವೆಯೇ ನಿರ್ಣಯವು ಧ್ವನಿಮತದೊಂದಿಗೆ ಅಂಗೀಕಾರಗೊಂಡಿತು.
Next Story





