ಲೋಕಸಭಾ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

Photo Credit : PTI
ಹೊಸದಿಲ್ಲಿ,ಡಿ.19: ಲೋಕಸಭಾ ಅಧಿವೇಶನವನ್ನು ಶುಕ್ರವಾರ ಅನಿರ್ದಿಷ್ಟಾವಧಿಯವರೆಗೆ ಮುಂದೂಡಲಾಗಿದೆ. 19 ದಿನಗಳ ಕಾಲ ನಡೆದ ಅಧಿವೇಶನದಲ್ಲಿ ವಿಬಿ- ಜಿ ರಾಮ್ ಜಿ ಹಾಗೂ ಖಾಸಗಿ ಸಂಸ್ಥೆಗಳಿಗೆ ನಾಗರಿಕ ಅಣುಶಕ್ತಿ ವಲಯವನ್ನು ತೆರೆದಿಡುವ ಶಾಂತಿ ಮಸೂದೆ ಸೇರಿದಂತೆ ಹಲವು ಮಹತ್ವದ ಮಸೂದೆಗಳನ್ನು ಅಂಗೀಕರಿಸಲಾಯಿತು.
ರಾಷ್ಟ್ರೀಯ ಗೀತೆ ವಂದೇಮಾತರಂಗೆ 150 ವರ್ಷಗಳು ತುಂಬಿದ ಸ್ಮರಣಾರ್ಥ ಹಾಗೂ ಚುನಾವಣಾ ಸುಧಾರಣೆ ಕುರಿತಾಗಿ ಲೋಕಸಭೆಯು ಕಾವೇರಿದ ಚರ್ಚೆಗಳಿಗೆ ಸಾಕ್ಷಿಯಾಯಿತು.
ಉನ್ನತ ಶಿಕ್ಷಣ ನಿಯಂತ್ರಕ ಸಂಸ್ಥೆಯೊಂದನ್ನು ನಿಯೋಜಿಸುವ ಮಸೂದೆಯನ್ನು ಉಭಯ ಸದನಗಳ ಜಂಟಿ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿದೆ.
ಮಾರುಕಟ್ಟೆ ಸೆಕ್ಯೂರಿಟಿಗಳ ಪ್ರತ್ಯೇಕ ಸಂಹಿತೆಯನ್ನು ಕೂಡಾ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಆನಂತರ ಆದನ್ನು ಹೆಚ್ಚಿನ ಪರಿಶೀಲನೆಗಾಗಿ ಇಲಾಖಾ ಸಂಬಂಧಿತ ಸ್ಥಾಯಿ ಸಮಿತಿಗೆ ಕಳುಹಿಸಿಕೊಡಲಾಗಿತ್ತು.
ಶನಿವಾರ ಲೋಕಸಭಾ ಕಲಾಪ ಆರಂಭಗೊಂಡ ಬೆನ್ನಲ್ಲೇ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.





