ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಸಚಿವ ಎಂ ಎ ಬೇಬಿ ಆಯ್ಕೆ

Photo | Facebook/BS Saran
ಮಧುರೈ: ಕೇರಳದ ಮಾಜಿ ಸಚಿವ ಎಂ ಎ ಬೇಬಿ ಸಿಪಿಐ(ಎಂ) ಪಕ್ಷದ 6ನೇ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಧುರೈನಲ್ಲಿ ನಡೆದ ಸಿಪಿಐ(ಎಂ) ಪಕ್ಷದ 24ನೇ ಸಮಾವೇಶದಲ್ಲಿ ಎಂ ಎ ಬೇಬಿ ಅವರನ್ನು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.
1954ರಲ್ಲಿ ಕೇರಳದ ಕೊಲ್ಲಂ ಜಿಲ್ಲೆಯ ಪ್ರಕ್ಕುಳಂನಲ್ಲಿ ಪಿ ಎಂ ಅಲೆಕ್ಸಾಂಡರ್ ಮತ್ತು ಲಿಲ್ಲಿ ಅಲೆಕ್ಸಾಂಡರ್ ದಂಪತಿಯ ಪುತ್ರನಾಗಿ ಜನಿಸಿದ ಎಂ ಎ ಬೇಬಿ, ಶಾಲಾ ದಿನಗಳಲ್ಲಿ ಎಸ್ಎಫ್ಐ ಮೂಲಕ ಹೋರಾಟದ ಜೀವನಕ್ಕೆ ಪಾದಾರ್ಪಣೆ ಮಾಡಿದರು. 1986 ರಿಂದ 1998ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದ ಎಂ ಎ ಬೇಬಿ 2012ರಿಂದ ಸಿಪಿಐ(ಎಂ) ಪಾಲಿಟ್ ಬ್ಯೂರೊ ಸದಸ್ಯರಾಗಿದ್ದಾರೆ.
ಸೀತಾರಾಂ ಯೆಚೂರಿ ಅವರ ನಿಧನದ ನಂತರ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ತೆರವಾಗಿತ್ತು. ಆ ಬಳಿಕ ಪ್ರಕಾಶ್ ಕಾರಟ್ ಅವರನ್ನು ಹಂಗಾಮಿ ಸಂಯೋಜಕರಾಗಿ ನೇಮಿಸಲಾಗಿತ್ತು.
Next Story





