ಕೆಲಸದ ಸ್ಥಳದಲ್ಲಿ ಮಹಿಳೆ ಮೇಲೆ ಪರಿಣಾಮ ಬೀರುವ ಯಾವುದೇ ಅನುಚಿತ ವರ್ತನೆ ಲೈಂಗಿಕ ಕಿರುಕುಳವಾಗಿದೆ: ಮದ್ರಾಸ್ ಹೈಕೋರ್ಟ್

ಮದ್ರಾಸ್ ಹೈಕೋರ್ಟ್ | PC : PTI
ಹೊಸದಿಲ್ಲಿ: ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಪರಿಣಾಮ ಬೀರುವ ಯಾವುದೇ ಅನುಚಿತ ಅಥವಾ ಅನಪೇಕ್ಷಿತ ನಡವಳಿಕೆಯು ಉದ್ದೇಶವನ್ನು ಲೆಕ್ಕಿಸದೆ ಲೈಂಗಿಕ ಕಿರುಕುಳವಾಗಿದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ(ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ (POSH ಕಾಯ್ದೆ) ಅಡಿಯಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಮಹತ್ವವನ್ನು ನೀಡುತ್ತದೆಯೇ ಹೊರತು ಅದರ ಹಿಂದಿನ ಉದ್ದೇಶಕ್ಕಲ್ಲ ಎಂದು ಮದ್ರಾಸ್ ಹೈಕೋರ್ಟ್ ಒತ್ತಿ ಹೇಳಿದೆ.
ನ್ಯಾಯಮೂರ್ತಿ ಆರ್.ಎನ್.ಮಂಜುಳಾ ಅವರು, ಕೆಲಸದ ಸ್ಥಳದಲ್ಲಿ ಅನುಚಿತ ವರ್ತನೆಯು ಉದ್ದೇಶವನ್ನು ಲೆಕ್ಕಿಸದೆ ಲೈಂಗಿಕ ಕಿರುಕುಳವಾಗಿದೆ. ಅನುಚಿತ ಮತ್ತು ಇತರ ಲಿಂಗಿಯರ(ಮಹಿಳೆ) ಮೇಲೆ ಪರಿಣಾಮ ಬೀರುವ ಅನಪೇಕ್ಷಿತ ನಡವಳಿಕೆ ಲೈಂಗಿಕ ಕಿರುಕುಳದ ವ್ಯಾಖ್ಯಾನದ ಅಡಿಯಲ್ಲಿ ಬರುತ್ತದೆ ಎಂದು US ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿ ಹೈಕೋರ್ಟ್ ಹೇಳಿದೆ.
ಪ್ರಮುಖ ಐಟಿ ಕಂಪನಿಯೊಂದರ ಹಿರಿಯ ಉದ್ಯೋಗಿಯೋರ್ವನ ವಿರುದ್ಧ 2017ರಲ್ಲಿ ಮೂವರು ಮಹಿಳಾ ಉದ್ಯೋಗಿಗಳು ದೂರನ್ನು ನೀಡಿದ್ದು ಆಗಾಗ್ಗೆ ಭುಜಗಳನ್ನು ಸ್ಪರ್ಶಿಸುತ್ತಿದ್ದ, ಕೈ ಕುಲುಕುವಂತೆ ಒತ್ತಾಯಿಸುತ್ತಿದ್ದ ಮತ್ತು ಕೆಲಸ ಮಾಡುವಾಗ ಹಿಂದಿನಿಂದ ಬಂದು ನಿಂತುಕೊಂಡು ಕಿರುಕುಳ ನೀಡತ್ತಿದ್ದ ಎಂದು ಆರೋಪಿಸಿದ್ದರು.





