ಚಮೋಲಿ ಜಲವಿದ್ಯುತ್ ಸುರಂಗದಲ್ಲಿ ಲೋಕೋ ರೈಲುಗಳ ಢಿಕ್ಕಿ: ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ

Credit: PTI Photo
ಡೆಹ್ರಾಡೂನ್: ನಿರ್ಮಾಣ ಹಂತದಲ್ಲಿರುವ ವಿಷ್ಣುಗಢ-ಪಿಪಲ್ಕೋಟಿ ಜಲವಿದ್ಯುತ್ ಯೋಜನೆಯ ಪಿಪಲ್ಕೋಟಿ ಸುರಂಗದೊಳಗೆ ಎರಡು ಲೋಕೋ ರೈಲುಗಳ ಢಿಕ್ಕಿ ಘಟನೆ ಕುರಿತು ಚಮೋಲಿ ಜಿಲ್ಲಾಧಿಕಾರಿ ಗೌರವ್ ಕುಮಾರ್ ಬುಧವಾರ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ಈ ಅಪಘಾತದಲ್ಲಿ 88 ಮಂದಿ ಗಾಯಗೊಂಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಗೌರವ್ ಕುಮಾರ್, ಮಂಗಳವಾರ ರಾತ್ರಿ ಸುಮಾರು 8.30ಕ್ಕೆ THDC (ಇಂಡಿಯಾ) ನಿರ್ಮಾಣ ಮಾಡುತ್ತಿರುವ ಸುರಂಗದೊಳಗೆ ಸುರಂಗ ಕೊರೆಯುವ ಯಂತ್ರವಿದ್ದ ಸ್ಥಳದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಸುರಂಗಕ್ಕಾಗಿ ಮಣ್ಣನ್ನು ಹೊರತೆಗೆಯಲೆಂದು ರಾತ್ರಿ ಪಾಳಿಯಲ್ಲಿ ಕೆಲಸಗಾರರನ್ನು ಹೊತ್ತೊಯ್ಯುತ್ತಿದ್ದ ಲೋಕೋ ರೈಲಿಗೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಮತ್ತೊಂದು ಲೋಕೋ ರೈಲು ನಿಯಂತ್ರಣ ಕಳೆದುಕೊಂಡು ಢಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿತ್ತು. ಈ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ.
Next Story





