ಮಹಾರಾಷ್ಟ್ರ | ಡಿಸೆಂಬರ್ 5ರಂದು ನೂತನ ಸರಕಾರ ಪ್ರಮಾಣ ವಚನ ಸಾಧ್ಯತೆ
ಸಿಎಂ ಆಯ್ಕೆ ಇನ್ನೂ ನಿಗೂಢ
Credit: PTI File Photo
ಮುಂಬೈ: ಡಿಸೆಂಬರ್ 5ರಂದು ಮಹಾರಾಷ್ಟ್ರದ ನೂತನ ಸರಕಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಶನಿವಾರ ಬಿಜೆಪಿ ನಾಯಕ ಹಾಗೂ ಕೊಲಾಬಾ ಸಂಸದ ರಾಹುಲ್ ನಾರ್ವೇಕರ್ ಬಹಿರಂಗಗೊಳಿಸಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭವು ಮುಂಬೈನ ಆಝಾದ್ ಮೈದಾನದಲ್ಲಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ನಡುವೆ, ಮಹಾರಾಷ್ಟ್ರ ಮುಖ್ಯಮಂತ್ರಿ ಹುದ್ದೆಯ ಕುರಿತು ಮಹಾಯುತಿ ಮೈತ್ರಿಕೂಟದಲ್ಲಿ ಇನ್ನೂ ಸಹಮತ ಮೂಡಿಲ್ಲ. ಅನಾರೋಗ್ಯಪೀಡಿತ ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂದೆ ತಮ್ಮ ತವರಿಗೆ ತೆರಳಿರುವುದರಿಂದ, ಶುಕ್ರವಾರ ನಡೆಯಬೇಕಿದ್ದ ಮಹಾಯುತಿ ಮೈತ್ರಿಕೂಟದ ಸಭೆ ರದ್ದಾಗಿತ್ತು. ಇಂದು ಸಂಜೆ ಅಥವಾ ರವಿವಾರ ಬೆಳಗ್ಗೆ ಏಕನಾಥ್ ಶಿಂದೆ ಮುಂಬೈಗೆ ಮರಳುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
Next Story