ಮಹಾರಾಷ್ಟ್ರ | ಹಿಂದಿ ಹೇರಿಕೆ ಆರೋಪ : ಭಾಷಾ ನೀತಿ ನಿರ್ಣಯ ರದ್ದು

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ | PTI
ಮುಂಬೈ: ಶಾಲೆಗಳಲ್ಲಿ ತ್ರಿಭಾಷಾ ಸೂತ್ರ ಕುರಿತು ನಿರ್ಣಯವನ್ನು ಮಹಾರಾಷ್ಟ್ರ ಸರಕಾರವು ರದ್ದುಗೊಳಿಸಿದ್ದು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮುಂದಿನ ಕ್ರಮದ ಬಗ್ಗೆ ಚರ್ಚಿಸಲು ಸಮಿತಿಯೊಂದನ್ನು ರಚಿಸುವುದಾಗಿ ಪ್ರಕಟಿಸಿದ್ದಾರೆ.
ಶಿವಸೇನೆ(ಯುಬಿಟಿ) ನೇತೃತ್ವದಲ್ಲಿ ಮುಂಬೈ ಮತ್ತು ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದು ಜೂ.17ರ ನಿರ್ಣಯದ ಪ್ರತಿಗಳನ್ನು ಸುಟ್ಟು ಹಾಕಿದ ಬಳಿಕ ಸರಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಇಂಗ್ಲಿಷ್ ಮತ್ತು ಮರಾಠಿ ಮಾಧ್ಯಮ ಶಾಲೆಗಳಲ್ಲಿ 1ರಿಂದ 5ನೇ ತರಗತಿವರೆಗೆ ಹಿಂದಿಯು ‘ಸಾಮಾನ್ಯ’ವಾಗಿ ತೃತೀಯ ಭಾಷೆಯಾಗಿರುತ್ತದೆ. ಆದರೆ ಕಡ್ಡಾಯವಲ್ಲ ಎಂದು ನಿರ್ಣಯದಲ್ಲಿ ಹೇಳಲಾಗಿತ್ತು.
ತಾನು ಹಿಂದಿ ವಿರೋಧಿಯಲ್ಲ,ಆದರೆ ಅದರ ಹೇರಿಕೆಯನ್ನು ಮಾತ್ರ ವಿರೋಧಿಸುತ್ತೇನೆ ಎಂದು ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ ಠಾಕ್ರೆ ಹೇಳಿದ್ದರು.
Next Story





