Maharashtra Local Body Election Result| ಆಡಳಿತಾರೂಢ ಮಹಾಯುತಿ 150 ಸ್ಥಾನಗಳಲ್ಲಿ, ಮಹಾ ವಿಕಾಸ್ ಅಘಾಡಿ 50 ಸ್ಥಾನಗಳಲ್ಲಿ ಮುನ್ನಡೆ

Photo| indianexpress
ಮುಂಬೈ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಆಡಳಿತಾರೂಢ ಮಹಾಯುತಿಗೆ 150ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಆರಂಭಿಕ ಮುನ್ನಡೆ ದೊರೆತಿದೆ. ಮತ್ತೊಂದೆಡೆ ವಿಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿಗೆ 50ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಆರಂಭಿಕ ಮುನ್ನಡೆ ದೊರೆತಿದೆ.
ಸಿಲೋದ್ ಸ್ಥಾನದಲ್ಲಿ ಶಿವಸೇನೆಯ ಅಭ್ಯರ್ಥಿ ಸಮೀರ್ ಸತ್ತಾರ್ ಮುನ್ನಡೆಯಲಿದ್ದರೆ, ಕನ್ನಾಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶೇಖ್ ಫರೀನ್ ಮುನ್ನಡೆಯಲ್ಲಿದ್ದಾರೆ. ಶಿವಸೇನೆ (ಉದ್ಭವ್ ಬಣ) ಅಭ್ಯರ್ಥಿ ಅಪರ್ಣಾ ಗೋರ್ಡೆ ಅವರು ಪೈಥಾನ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, ಬಿಜೆಪಿ 85 ಸ್ಥಾನಗಳಲ್ಲಿ, ಶಿವಸೇನೆ (ಶಿಂದೆ ಬಣ) 41 ಸ್ಥಾನಗಳಲ್ಲಿ ಹಾಗೂ ಎನ್ಸಿಪಿ (ಅಜಿತ್ ಪವಾರ್ ಬಣ) 32 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಮತ್ತೊಂದೆಡೆ ಶಿವಸೇನೆ (ಉದ್ಭವ್ ಬಣ) 10 ಸ್ಥಾನಗಳಲ್ಲಿ, ಎನ್ಸಿಪಿ (ಶರದ್ ಪವಾರ್ ಬಣ) 12 ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು 16 ನಗರ ಪಾಲಿಕೆ ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳೂ ಪ್ರಬಲ ಪೈಪೋಟಿ ನೀಡುತ್ತಿದ್ದು 20 ನಗರ ಪಾಲಿಕೆ ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ.







