ಬಿಹಾರ: ಗಾಯಕಿ ಮೈಥಿಲಿ ಠಾಕೂರ್ ಬಿಜೆಪಿಗೆ ಸೇರ್ಪಡೆ

ಮೈಥಿಲಿ ಠಾಕೂರ್ | Photo Credi : NDTV
ಪಾಟ್ನಾ: ಜಾನಪದ ಗಾಯಕಿ ಮೈಥಿಲಿ ಠಾಕೂರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನವೆಂಬರ್ನಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ, ಬಿಜೆಪಿಯ ಹಿರಿಯ ನಾಯಕರ ಸಮ್ಮುಖದಲ್ಲಿ 25 ವರ್ಷದ ಗಾಯಕಿ ಮೈಥಿಲಿ ಠಾಕೂರ್ ರಾಜ್ಯ ಬಿಜೆಪಿ ಮುಖ್ಯ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಮಧುಬನಿಯ ಬೇನಿಪಟ್ಟಿ ನಿವಾಸಿಯಾದ ಮೈಥಿಲಿ ಠಾಕೂರ್, ತಮ್ಮ ತವರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು.
ಬಿಜೆಪಿ ಸೇರ್ಪಡೆಯಾದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಮೈಥಿಲಿ ಠಾಕೂರ್, "ನಾನು ಯಾವಾಗಲೂ ಬಿಹಾರದ ಜನತೆಯೊಂದಿಗೆ ಸಂಗೀತ ಮತ್ತು ಸಂಸ್ಕೃತಿಯ ಮೂಲಕ ಸಂಪರ್ಕ ಹೊಂದಿದ್ದೆ. ಇದೀಗ ಸಾರ್ವಜನಿಕ ಜೀವನದ ಮೂಲಕ ಅವರಿಗೆ ಸೇವೆ ಸಲ್ಲಿಸಲು ಬಯಸುತ್ತೇನೆ" ಎಂದು ಹೇಳಿದರು.
Next Story





